ಚಿತ್ರದುರ್ಗದ ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಆರೋಪಿಗಳಾಗಿ ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಸೇರಿ 17 ಆರೋಪಿಗಳು ವಿಚಾರಣೆಗೆ ಕೋರ್ಟ್‍ಗೆ ಹಾಜರಾಗಿದ್ದರು. ಆದರೆ ವಿಚಾರಣೆಯನ್ನು ಕೋರ್ಟ್ ಫೆ.25ಕ್ಕೆ ಮುಂದೂಡಿದೆ.
ವಿಚಾರಣೆಗೆ ಆಗಮಿಸಿದಾಗ ದರ್ಶನ್ ಮತ್ತು ಪವಿತ್ರಾ ಗೌಡ ಮುಖ ಮುಖಿ ಆಗಿದ್ದಾರೆ. ಬೆನ್ನು ತಟ್ಟಿ ದರ್ಶನ್ ಪವಿತ್ರಾ ಅವರನ್ನು ಸಂತೈಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿದ್ದರೂ ಏಳು ಆರೋಪಿಗಳಿಗೆ ನೀಡಿರುವ ಜಾಮೀನು ರದ್ದು ಕೋರಿ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಆ ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.
ಇಂಟೆರಿಮ್ ಬೇಲ್, ರೆಗ್ಯೂಲರ್ ಬೇಲ್ ಒಳಗೆ ಮರ್ಜ್ ಆಗಿ ವರ್ಷಾಂತ್ಯಕ್ಕೆ ಬಂಧಮುಕ್ತರಾಗಿದ್ದ ದರ್ಶನ್ ಗ್ಯಾಂಗ್‌ಗೆ ಕೇಸ್ ಮತ್ತೆ ಸಮಸ್ಯೆಯಾಗಿ ಪರಿಣಮಿಸಿದೆ.
ಜಾಮೀನಿನ ಮೇಲೆ ಹೊರಗಿರುವ ನಮಗೆ ಹೊರ ರಾಜ್ಯದ ಕೆಲವು ದೇವಾಲಯಗಳಿಗೆ ಹೋಗಬೇಕಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಹೊರ ರಾಜ್ಯಗಳಲ್ಲಿರುವ ದೇವಾಲಯಗಳಿಗೆ ಹೋಗಿ ಬರಲು ಅವಕಾಶ ನೀಡಬೇಕು ಎಂದು ಪವಿತ್ರಾಗೌಡ ಪರ ವಕೀಲರು ಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯನ್ನು ವಿಚಾರಣೆ ಮಾಡಿ ಕೋರ್ಟ್ ಅನುಮತಿ ನೀಡಲಿದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.