Menu

ಅತಿಥಿ ಶಿಕ್ಷಕರು, ಉಪನ್ಯಾಸಕರ ಗೌರವ ಸಂಭಾವನೆ 2 ಸಾವಿರ ರೂ. ಏರಿಕೆ

ರಾಜ್ಯದ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಗೌರವ ಸಂಭಾವನೆ ಮಾಸಿಕವಾಗಿ ತಲಾ ₹2,000 ಗಳಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರಿಗೆ ಇದು ಅನ್ವಯಿಸುವುದು. ಮುಂದಿನ ಆದೇಶದವರೆಗೆ ಈ ಪರಿಷ್ಕೃತ ಗೌರವ ಸಂಭಾವನೆ ಜಾರಿಯಲ್ಲಿರಲಿದೆ ಎಂದು ಆದೇಶ ತಿಳಿಸಿದೆ. ಈ ಹಿಂದೆ ಸರ್ಕಾರ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ₹10,000 ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹10,500 ಗೌರವ ಸಂಭಾವನೆ ನಿಗದಿಪಡಿಸಿತ್ತು. ಇದೀಗ ಈ ಮೊತ್ತಕ್ಕೆ ಹೆಚ್ಚುವರಿಯಾಗಿ ₹2,000 ಸೇರಿಸಿ ಪರಿಷ್ಕೃತ ಗೌರವ ಸಂಭಾವನೆಯು ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ₹12,000 ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ ₹12,500 ಆಗಲಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೂ ₹2,000 ಗಳಷ್ಟು ಗೌರವಧನ ಹೆಚ್ಚಳವಾಗಿದೆ. ಈ ಹಿಂದೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ₹12,000 ನಿಗದಿಯಾಗಿತ್ತು. ಪರಿಷ್ಕೃತ ಗೌರವ ಸಂಭಾವನೆಯು ಅತಿಥಿ ಉಪನ್ಯಾಸಕರಿಕೆ ₹14,000ಕ್ಕೆ ಏರಿಕೆಯಾಗಿದೆ.

Related Posts

Leave a Reply

Your email address will not be published. Required fields are marked *