ದೆಹಲಿಯಲ್ಲಿ 27 ವರ್ಷಗಳ ನಂತರ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಮುಖ್ಯಮಂತ್ರಿ ಆಗಿ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಅವರಿಗೆ ಮಣೆ ಹಾಕಿದೆ. ರೇಖಾ ಗುಪ್ತಾ ಗುರುವಾರ (ಇಂದು ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಶಾಲಿಮಾರ್ ಭಾಗ್ ಕ್ಷೇತ್ರದಿಂದ ಮೊದಲ ಬಾರಿ ಶಾಸಕಿ ಆಗಿ ಆಯ್ಕೆಯಾಗಿರುವ ರೇಖಾ ಗುಪ್ತಾ ಆರ್ ಎಸ್ ಎಸ್ ಸಕ್ರಿಯ ಕಾರ್ಯಕರ್ತೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ರೇಖಾ ಗುಪ್ತಾ ಅವರ ಹೆಸರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ.
ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ರೇಖಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಲಿದ್ದಾರೆ. 27 ವರ್ಷಗಳ ಹಿಂದೆ ಬಿಜೆಪಿಯ ಕೊನೆಯ ದೆಹಲಿ ಸಿಎಂ ಮಹಿಳೆ ಆಗಿದ್ದರು ಎಂಬುದು ಗಮನಾರ್ಹ.
ಸುಷ್ಮಾ ಸ್ವರಾಜ್ ದೆಹಲಿ ಸಿಎಂ ಆಗಿ 1988ರಲ್ಲಿ 52 ದಿನ ಆಡಳಿತ ನಡೆಸಿದ್ದರು. ಕಾಂಗ್ರೆಸ್ ನ ಶೀಲಾ ದೀಕ್ಷಿತ್ ಮೂರು ಅವಧಿ ಅಧಿಕಾರ ನಡೆಸಿದ್ದರು. ಅರವಿಂದ್ ಕೇಜ್ರಿವಾಲ್ 10 ವರ್ಷ ಆಪ್ ಸರ್ಕಾರ ನಡೆಸಿದ್ದು, ಕೊನೆಯ 2 ತಿಂಗಳು ಎಎಪಿಯ ಅತಿಶಿ ಸಿಎಂ ಆಗಿದ್ದರು.