Menu

ಜಲಪಾತದಲ್ಲಿ ರೀಲ್ಸ್​ : ಕೊಚ್ಚಿಕೊಂಡು ಹೋದ ಯುಟ್ಯೂಬರ್‌

ಒಡಿಶಾದ ಕೊರಾಪುಟ್‌ನಲ್ಲಿರುವ ದುಡುಮಾ ಜಲಪಾತದಲ್ಲಿ ರೀಲ್ಸ್​ ಮಾಡಲು ಹೋಗಿ ಯೂಟ್ಯೂಬರ್ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಗಂಜಾಂ ಜಿಲ್ಲೆಯ ಬೆರ್ಹಾಂಪುರ್ ನಿವಾಸಿಯಾದ ಯೂಟ್ಯೂಬರ್ ಸಾಗರ್ ತುಡು ಸ್ನೇಹಿತ ಅಭಿಜೀತ್ ಬೆಹೆರಾ ಅವರೊಂದಿಗೆ ಕೊರಾಪುಟ್‌ಗೆ ಹೋಗಿದ್ದರು. ಪ್ರವಾಸಿ ಸ್ಥಳಗಳ ವೀಡಿಯೊಗಳನ್ನು ಮಾಡಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು.

ಸಾಗರ್ ಜಲಪಾತದ ಬಳಿಯ ಬಂಡೆಯ ಮೇಲೆ ನಿಂತು ಡ್ರೋನ್ ಕ್ಯಾಮೆರಾದೊಂದಿಗೆ ರೀಲ್ ರೆಕಾರ್ಡ್ ಮಾಡುತ್ತಿದ್ದರು. ಆ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ಮಚಕುಂಡ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಲಾಯಿತು. ನೀರಿನ ಬಿಡುಗಡೆಯಿಂದಾಗಿ ಜಲಪಾತದಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿ ಹರಿವು ವೇಗ ಪಡೆದು ಸಾಗರ್‌ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಸಾಗರ್ ನಿಂತಿದ್ದ ಬಂಡೆಯು ನೀರಿನಿಂದ ಆವೃತಗೊಂಡು ಪ್ರವಾಹಕ್ಕೆ ಸಿಲುಕಿಕೊಂಡಾಗ ಅಲ್ಲಿದ್ದವರು ಅವರನ್ನು ರಕ್ಷಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗದೆ ಕಣ್ಣೆದುರೇ ಜಲ ಪ್ರವಾಹ ಅವರನ್ನು ಕೊಚ್ಚಿಕೊಂಡು ಹೋಗಿದೆ.

Related Posts

Leave a Reply

Your email address will not be published. Required fields are marked *