Menu

ರೀಲ್ಸ್‌ ಹುಚ್ಚು: ಜಲಪಾತದಲ್ಲಿ ಮುಳುಗಿ ಮೂವರು ಯುವತಿಯರ ಸಾವು

ಆಂಧ್ರಪ್ರದೇಶದಲ್ಲಿ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಮುಲ್ಲುಂಗುಮ್ಮಿ ಜಲಪಾತ ಬಳಿ ರೀಲ್ಸ್‌ ಮಾಡಲು ಹೋಗಿದ್ದ ಮೂವರು ಯುವತಿಯರು ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ರೀಲ್ಸ್ ಮಾಡುತ್ತಿದ್ದಂತೆಯೇ‌ ಕ್ಯಾಮೆರಾ ಮುಂದೆಯೇ ಮುಳುಗಿ ಮೃತಪಟ್ಟಿದ್ದಾರೆ. 17 ವರ್ಷದ ತ್ರಿಶಾ, 16 ವರ್ಷದ ರತ್ನ ಕುಮಾರಿ, 16 ವರ್ಷದ ಪವಿತ್ರಾ ಮೃತ ಮಹಿಳೆಯರು ಎಂದು ಗುರುತಿಸಲಾಗಿದೆ. ಜೊತೆಗಿದ್ದ ಇಬ್ಬರು ಹುಡುಗಿಯರು ಸುರಕ್ಷಿತವಾಗಿ ಪಾರಾಗಿದ್ದಾರೆ.

ನೀರಿನ ದಡದಲ್ಲೇ ಇದ್ದ ಯುವತಿಯರು ರೀಲ್ಸ್‌ ಮಾಡುತ್ತ ಮುಂದಕ್ಕೆ ಹೋಗಿದ್ದಾರೆ. ಆಳ ಹೆಚ್ಚಿದ್ದ ಕಡೆ ಇಬ್ಬರು ಯುವತಿಯರು ಮುಳುಗಿದ್ದಾರೆ, ಬಳಿಕ ಹೊರಬರಲಾಗದೇ ಮೂವರು ಅಸು ನೀಗಿದ್ದಾರೆ.

ಬೇಸಿಗೆ ರಜೆಯಲ್ಲಿ ಸ್ನೇಹಿತೆಯರು ಪ್ರವಾಸಕ್ಕೆ ತೆರಳಿದ್ದು, ರೀಲ್ಸ್ ಮಾಡುವ ಹುಚ್ಚು ಮತ್ತು ಸೆಲ್ಫಿ ವ್ಯಾಮೋಹವು ಪ್ರಾಣವನ್ನೇ ಕಸಿದುಕೊಂಡಿದೆ. ಅನಂತಗಿರಿ ಮಂಡಲದ ಮಲುಂಗುಮ್ಮಿ ಜಲಪಾತ ಬಳಿ ಬಂಡೆಗಳ ಮೇಲೆ ನಿಂತು ಸೆಲ್ಫಿ ಹಾಗೂ ಇನ್ಸ್ಟಾಗ್ರಾಮ್ ರೀಲ್ಸ್ ಚಿತ್ರೀಕರಣ ನಡೆಸುತ್ತಿದ್ದರು. ದಡದಲ್ಲಿದ್ದ ಸ್ನೇಹಿತೆ ಫೋಟೋ ಕ್ಲಿಕ್ಕಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಸೆಲ್ಫಿ ಮತ್ತು ವೀಡಿಯೊ ತೆಗೆಯುವ ಭರದಲ್ಲಿ ತ್ರಿಷಾ ಆಯತಪ್ಪಿ ಆಳವಾದ ನೀರಿನ ಸೆಳೆತಕ್ಕೆ ಬಿದ್ದಾಗ ಅವಳನ್ನು ರಕ್ಷಿಸಲು ಪವಿತ್ರಾ, ರತ್ನಕುಮಾರಿ ಮತ್ತು ಅಂಜಲಿ ಒಬ್ಬರ ಹಿಂದೆ ಒಬ್ಬರು ನೀರಿಗೆ ಧುಮುಕಿದರು. ನೀರಿನ ಸೆಳೆತ ದಿಂದಾಗಿ ಅವರಿಗೆ ಈಜಲು ಸಾಧ್ಯವಾಗಲಿಲ್ಲ. ಸ್ಥಳೀಯರು ತಕ್ಷಣ ಹೊರತೆಗೆದರೂ ತ್ರಿಷಾ, ರತ್ನಕುಮಾರಿ ಮತ್ತು ಪವಿತ್ರಾ ಉಸಿರುಗಟ್ಟಿ ಮೃತಪಟ್ಟಿದ್ದರು. ಅಂಜಲಿ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Related Posts

Leave a Reply

Your email address will not be published. Required fields are marked *