ಪಾಟ್ನಾ: ಬಿಹಾರ ವಿಧಾನಸಭೆಯ ಎರಡನೇ ಹಾಗೂ ಅಂತಿಮ ಹಂತದ ಮತದಾನ ಮುಕ್ತಾಯಗೊಂಡಿದ್ದು, ಸಂಜೆ 5.30ರ ವೇಳೆಗೆ ಶೇ.67.14ರಷ್ಟು ಮತದಾನವಾಗಿದೆ.
ಬಿಹಾರ ವಿಧಾನಸಭೆಯ 243 ವಿಧಾನಸಭಾ ಕ್ಷೇತ್ರಗಳಿಗೆ 121 ಸ್ಥಾನಗಳಿಗೆ ಮೊದಲ ಹಂತದ ಚುನಾವಣೆ ನಡೆದಿದ್ದು, ಶೇ.61 ಹಾಗೂ ಮಂಗಳವಾರ 122 ಸ್ಥಾನಗಳಿಗೆ ಎರಡನೇ ಹಂತದ ಮತದಾನವಾಗಿದ್ದು, ಶೇ.67.14ರಷ್ಟು ಮತದಾನ ಆಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ದೈನಿಕ್ ಭಾಸ್ಕರ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟಕ್ಕೆ ಜಯ ದೊರೆಯಲಿದ್ದು, ಇಂಡಿಯಾ ಮೈತ್ರಿಕೂಟ ಗೆಲುವಿನ ಹೊಸ್ತಿಲಲ್ಲಿ ಎಡವಿದೆ.
ಬಿಹಾರ ವಿಧಾನಸಭೆಯ 243 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಮ್ಯಾಜಿಕ್ ನಂಬರ್ 122 ಆಗಿದೆ. ಎನ್ ಡಿಎ ಮೈತ್ರಿಕೂಟಕ್ಕೆ 131 ಸ್ಥಾನ ಪಡೆದು ಬಹುಮ ಪಡೆಯಲಿದೆ. ಇಂಡಿಯಾ ಮೈತ್ರಿಕೂಟ 112 ಸ್ಥಾನದೊಂದಿಗೆ ಗೆಲುವಿನ ಹೊಸ್ತಿಲಲ್ಲಿ ಎಡವಿದೆ.
ಎನ್ ಡಿಎ ಮೈತ್ರಿಕೂಟದ ಪಕ್ಷಗಳಾದ ಬಿಜೆಪಿಗೆ 80, ಜೆಡಿಯುಗೆ 45 ಸ್ಥಾನಗಳು ದೊರೆಯಲಿದ್ದರೆ, ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ 19 ಹಾಗೂ ಆರ್ ಜೆಡಿ ಪಕ್ಷಕ್ಕೆ 77 ಸ್ಥಾನಗಳು ದೊರೆಯಲಿವೆ ಎಂದು ಹೇಳಲಾಗಿದೆ.


