Wednesday, October 22, 2025
Menu

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ 103 ಬಸ್​ ನಿಲ್ದಾಣ ಸ್ಥಳಾಂತರಕ್ಕೆ ಶಿಫಾರಸು

bmtc

ಬೆಂಗಳೂರು: ನಗರದಲ್ಲಿನ ಅವೈಜ್ಞಾನಿಕ ಅಸಮರ್ಪಕ ಬಸ್​ ನಿಲ್ದಾಣಗಗಳನ್ನು ಸ್ಥಳಾಂತರ ಮಾಡಲು ಸಂಚಾರ​ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಿದ್ದಾರೆ.

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಟ್ರಾಫಿಕ್​ ಸಿಗ್ನಲ್​ಗಳ ಬಳಿಯೇ ಬಸ್​ ನಿಲ್ದಾಣಗಳಿರುವುದೂ ಕೂಡ ಟ್ರಾಫಿಕ್​ ಜಾಮ್​​ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಸಂಚಾರ ಪೊಲೀಸರು, ಬಿಎಂಟಿಸಿ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ನಡೆಸಿ ಸ್ಥಳಾಂತರ ಮಾಡಬೇಕಾದ 103 ಬಸ್​ ನಿಲ್ದಾಣಗಳ ಪಟ್ಟಿ ಮಾಡಿದ್ದಾರೆ.

ಬಸ್​ ನಿಲ್ದಾಣಗಳ ಸ್ಥಳಾಂತರಕ್ಕೆ ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ

ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಸಿಗ್ನಲ್​ಗಳಿಗೆ ಸಮೀಪವಿರುವ 103 ಬಸ್​ ನಿಲ್ದಾಣಗಳನ್ನು ಕನಿಷ್ಠ 50 ಮೀಟರ್​​ಗಳಿಂದ 300 ಮೀಟರ್​ಗಳವರೆಗೂ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ ಎಂದು ಸಂಚಾರ ಪೊಲೀಸರು, ಬಿಎಂಟಿಸಿ ಸಮೀಕ್ಷೆಯಲ್ಲಿ ಮನಗಂಡಿದ್ದಾರೆ. ಹೀಗಾಗಿ ಸ್ಥಳಾಂತರ ಮಾಡಿ ಎಂದು ಗ್ರೇಟರ್​ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂ, ಎಂ.ಜಿ ರಸ್ತೆ, ಯಲಹಂಕ ಆರ್​ಎಂಜೆಡ್​​, ಈಸ್ಟ್​ ಎಂಡ್​ ಜಂಕ್ಷನ್​, ಐಟಿಪಿಎಲ್​ ಆರ್​ಎಕ್ಸ್​ಡಿಕ್ಸ್​ ಆಸ್ಪತ್ರೆ, ಹೋಫ್​ಫಾರ್ಮ್​​​​ ಜಂಕ್ಷನ್​ ಸೇರಿ 103 ಸ್ಥಳಗಳಲ್ಲಿ ಟ್ರಾಫಿಕ್​ ದಟ್ಟಣೆ ಇಳಿಸುವ ಉದ್ದೇಶವಿದೆ.

Related Posts

Leave a Reply

Your email address will not be published. Required fields are marked *