ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಬಂಡಾಯ ಕಾಣಿಸಿಕೊಂಡಿದ್ದು, ಮಾಜಿ ಕೇಂದ್ರ ಸಚಿವ ಆರ್ ಕೆ ಸಿಂಗ್ ಸೇರಿದಂತೆ ಮೂವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಪಕ್ಷದಿಂದ ಅಮಾನತು ಮಾಡಿದ ಬೆನ್ನಲ್ಲೇ ಬಿಹಾರದ ಹಿರಿಯ ರಾಜಕಾರಣಿ ಆರ್ ಕೆ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿ ತೊರೆದಿದ್ದಾರೆ.
ಪಕ್ಷದ ಇನ್ನಿಬ್ಬರು ಸದಸ್ಯರಾದ ಶಾಸಕ ಅಶೋಕ್ ಅಗರ್ ವಾಲ್ ಮತ್ತು ಮೇಯರ್ ಉಷಾ ಅಗರ್ ವಾಲ್ ವಿರುದ್ಧವೂ ಬಿಜೆಪಿ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲು ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಅರವಿಂದ್ ಶರ್ಮ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ನಿಮ್ಮನ್ನು ಪಕ್ಷದಿಂದ ಯಾಕೆ ಅಮಾನತು ಮಾಡಬಾರದು ಎಂದು ಮೂವರಿಗೆ ಶನಿವಾರ ಬೆಳಿಗ್ಗೆ ನೋಟಿಸ್ ಜಾರಿ ಮಾಡಿದ್ದರು.


