Menu

ಆರ್‌ಸಿಬಿ ಗೆಲುವು: ಗಪ್ ಚುಪ್ ಪಾನಿಪುರಿಯಿಂದ ಅನ್ನದಾನ

18 ನೇ ಐಪಿಎಲ್ ಕಪ್ ಗೆದ್ದ ಆರ್‌ಸಿಬಿಯ ಗೆಲುವನ್ನು ಅಭಿಮಾನಿಗಳು ರಾಜ್ಯಾದ್ಯಂತ ಇನ್ನಿಲ್ಲದಂತೆ ಸಂಭ್ರಮಿಸುತ್ತಿದ್ದು, ಹರಿಹರ ಪಟ್ಟಣದ ಗಪ್ ಚುಪ್ ಪಾನಿಪುರಿ ಸೆಂಟರ್ ವತಿಯಿಂದ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಅನ್ನದಾನ ನಡೆಯುವ ಸ್ಥಳ ಸೇರಿದಂತೆ ಮಾಹಿತಿಯನ್ನು ಆಯೋಜಕರು ಸೋಷಿಯಲ್‌ ಮೀಡಿಯಾದಲ್ಲಿ  ನೀಡಿ, ಊಟಕ್ಕೆ  ಆಹ್ವಾನಿಸಿದ್ದಾರೆ.  ಅನ್ನದಾನದ ಮೂಲಕ ಇಲ್ಲಿ ಅಭಿಮಾನಿಗಳು ಆರ್‌ಸಿಬಿಯ ಗೆಲುವನ್ನು ಆಚರಿಸುತ್ತಿದ್ದಾರೆ. ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಪಡೆದ ಆರ್‌ಸಿಬಿ ತಂಡಕ್ಕೆ ಈ ಮೂಲಕ ಗೌರವ ಸಮರ್ಪಣೆ ಮಾಡುತ್ತಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಯಿಂದ ಅನ್ನದಾನ ಆರಂಭಗೊಳ್ಳುತ್ತಿದ್ದು, ಅಡುಗೆ ತಯಾರಾಗುತ್ತಿದ್ದು, ಸಾವಿರಕ್ಕೂ ಅಧಿಕ ಜನರಿಗೆ ಊಟ ನೀಡಲು ವ್ಯವಸ್ಥೆ ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *