ಈ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ 2.69 ಲಕ್ಷ ಕೋಟಿ ರೂ. ಲಾಭಾಂಶವನ್ನು ಶುಕ್ರವಾರ ಘೋಷಿಸಿದೆ, ಇದು 2023-24 ರಲ್ಲಿ ಪಾವತಿಸಿದ್ದಕ್ಕಿಂತ ಶೇಕಡಾ 27.4 ರಷ್ಟು ಹೆಚ್ಚಾಗಿದೆ. 2023-24ನೇ ಆರ್ಥಿಕ ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಸರ್ಕಾರಕ್ಕೆ 2.1 ಲಕ್ಷ ಕೋಟಿ ರೂಪಾಯಿ ಲಾಭಾಂಶ ವರ್ಗಾಯಿಸಿತ್ತು. 2022-23ನೇ ಸಾಲಿಗೆ ಪಾವತಿ 87,416 ಕೋಟಿ ರೂ.ಗಳಾಗಿತ್ತು.
ಗವರ್ನರ್ ಸಂಜಯ್ ಮಲ್ಹೋತ್ರಾ ಅಧ್ಯಕ್ಷತೆಯಲ್ಲಿ ನಡೆದ ಭಾರತೀಯ ರಿಸರ್ವ್ ಬ್ಯಾಂಕ್ನ ಕೇಂದ್ರೀಯ ನಿರ್ದೇಶಕರ ಮಂಡಳಿಯ 616 ನೇ ಸಭೆಯಲ್ಲಿ ಲಾಭಾಂಶ ಪಾವತಿಯ ಕುರಿತು ನಿರ್ಧಾರ ತೆಗೆದುಕೊಂಡಿದ್ದು, ಜಾಗತಿಕ ಮತ್ತು ದೇಶೀಯ ಆರ್ಥಿಕ ಸನ್ನಿವೇಶವನ್ನು ಮಂಡಳಿಯು ಪರಿಶೀಲಿಸಿದೆ ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
.2025 ಮೇ 15 ರಂದು ನಡೆದ ಸಭೆಯಲ್ಲಿ ಕೇಂದ್ರ ಮಂಡಳಿಯು ಅನುಮೋದಿಸಿದಂತೆ ಪರಿಷ್ಕೃತ ಆರ್ಥಿಕ ಬಂಡವಾಳ ಚೌಕಟ್ಟಿನ ಆಧಾರದ ಮೇಲೆ ವರ್ಷಕ್ಕೆ (2024-25) ವರ್ಗಾಯಿಸಬಹುದಾದ ಹೆಚ್ಚುವರಿಯನ್ನು ನಿರ್ಧರಿಸಲಾಗಿದೆ. ಮಂಡಳಿಯು 2024-25ರ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಮೊತ್ತವಾಗಿ 2,68,590.07 ಕೋಟಿ ರೂ. ವರ್ಗಾಯಿಸಲು ಅನುಮೋದನೆ ನೀಡಿದೆ ಎಂದು ಆರ್ಬಿಐ ತಿಳಿಸಿದೆ.