ಆರ್ಟ್ ಆಫ್ ಲಿವಿಂಗ್ನ ರವಿ ಶಂಕರ್ ಗುರೂಜಿ ಅವರ ಜೀವನ ಪಯಣ ಸಿನಿಮಾ ರೂಪ ಪಡೆಯಲಿದೆ. ಬಾಲಿವುಡ್ ನಟ ವಿಕ್ರಾಂತ್ ಮೆಸ್ಸಿ ರವಿಶಂಕರ್ ಅವರ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಗುರೂಜಿ ಜೊತೆಗಿನ ಪೋಟೊ ಸಮೇತ ಈ ವಿಚಾರವನ್ನು ವಿಕ್ರಾಂತ್ ಮೆಸ್ಸಿ ತಿಳಿಸಿದ್ದಾರೆ.
ವಿಕ್ರಾಂತ್ ಮೆಸ್ಸಿ ಕಳೆದ ವರ್ಷ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆಂದು ಸುದ್ದಿಯಾಗಿತ್ತು. ದಿ ಸಬರಮತಿ ರಿಪೋರ್ಟ್ ಚಿತ್ರದ ಬಳಿಕ ಅವರು ಚಿತ್ರರಂಗ ತೊರೆಯುವ ಮನಸ್ಸು ಮಾಡಿದ್ದಾರೆ ಎನ್ನಲಾಗಿತ್ತು.
ಇದೀಗ ರವಿಶಂಕರ್ ಗುರೂಜಿ ಬಯೋಪಿಕ್ ಮೂಲಕ ಮತ್ತೆ ಸಿನಿಮಾದಲ್ಲಿ ಮಿಂಚಲು ಸಿದ್ಧರಾಗಿದ್ದು, ಆಗಸ್ಟ್ ನಿಂದ ಶೂಟಿಂಗ್ ಆರಂಭಗೊಳ್ಳಲಿದೆ.