ಬೆಂಗಳೂರಿನ ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನೊಬ್ಬ ಗ್ರಾಹಕನಿಂದ ಹೆಚ್ಚುವರಿ ಹಣ ಕೇಳಿ ಕಿರಿಕ್ ಮಾಡಿ ಕೆಟ್ಟ ಪದಗಳಿಂದ ಬೈದಿದ್ದ ವೀಡಿಯೊ ರೆಕಾರ್ಡ್ ಗಮನಿಸಿದ ರ‍್ಯಾಪಿಡೋ ಕಂಪೆನಿಯು ಆತನ ಐಡಿ ಬ್ಲಾಕ್ ಮಾಡುವ ಮೂಲಕ ಕ್ರಮ ಕೈಗೊಂಡಿದೆ.
ಮಳೆ ಮಧ್ಯೆಯೇ ಬಾಡಿಗೆ ಬಂದಿದ್ದ ಚಾಲಕ, ಲೋಕೆಷನ್ ರೀಚ್ ಆಗ್ತಿದ್ದ 5೦ ರೂಪಾಯಿ ಹೆಚ್ಚು ಕೇಳಿದ್ದ. ಆಟೋ ಹತ್ತುವಾಗ ಹೆಚ್ಚುವರಿ ಹಣ ಕೊಡುವುದಾಗಿ ಹೇಳಿ ಈಗ ಪ್ರಯಾಣಿಕ ಕಿರಿಕ್ ಮಾಡುತ್ತಿರುವುದಾಗಿ ಆಟೊ ಚಾಲಕನ ಆಳಲು.
ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಗ್ರಾಹಕ ವೀಡಿಯೊ ರೆಕಾರ್ಡ್ ಮಾಡಿ ಎಕ್ಸ್ ನಲ್ಲಿ ಅಪ್ಲೋಡ್ ಮಾಡಿ, ಪೊಲೀಸರು ಹಾಗೂ ರ‍್ಯಾಪಿಡೋ ಕಂಪನಿಗೆ ಟ್ಯಾಗ್ ಮಾಡಿದ್ದ. ಎಚ್ಚೆತ್ತ ಕಂಪನಿ ಚಾಲಕನ ಐಡಿ ರದ್ದು ಮಾಡುವುದಾಗಿ ಪ್ರತಿಕ್ರಿಯಿಸಿದೆ.