Menu

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ರ‍್ಯಾಪಿಡೋ ಆಟೋ ಚಾಲಕರು

ಬೆಂಗಳೂರಿನ ರ‍್ಯಾಪಿಡೋ ಆಟೋ ಚಾಲಕರು ಮತ್ತು  ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ ಚಾಲಕರ  ಕದನ ರಾಷ್ಟ್ರಪತಿ ಅಂಗಳಕ್ಕೆ ತಲುಪಿದೆ.  ರ‍್ಯಾಪಿಡೋ ಆಟೋ ಚಾಲಕರು ರಾಷ್ಟ್ರಪತಿಗೆ  ದಯಾಮರಣದ ಬೇಡಿಕೆ  ಇಟ್ಟು ಪತ್ರ ಬರೆದಿದ್ದಾರೆ.

ರ‍್ಯಾಪಿಡೋ ಆಟೋ ಚಾಲಕರು ವೈಟ್ ಬೋರ್ಡ್ ಟ್ಯಾಕ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ , ವೈಟ್ ಬೋರ್ಡ್ ಬೈಕ್ ಟ್ಯಾಕ್ಸಿ  ನಿಷೇಧಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದಾರೆ.  ನಿಷೇಧಿಸದಿದ್ದರೆ  ದಯಾಮರಣಕ್ಕೆ ಅನುಮತಿ ನೀಡಿ ಎಂದು ಪತ್ರದಲ್ಲಿ ಕೋರಿದ್ದಾರೆ.

ಸತತ 7 ವರ್ಷಗಳಿಂದ ನ್ಯಾಯಾಲಯದಲ್ಲಿ  ಕೇಸ್ ನಡೆಯುತ್ತಿದೆ, ಇಲ್ಲಿಯವರೆಗೆ ಕೋರ್ಟ್ ನಲ್ಲಿ ಯಾವುದೇ ತೀರ್ಮಾನವಾಗಿಲ್ಲ‌. ಚಾಲಕರು ನ್ಯಾಯಾಲಯದ ಮೇಲೆ ನಂಬಿಕೆ ಕಳೆದುಕೊಂಡಿದ್ದೇವೆ.  ರಾಜ್ಯ ಸರ್ಕಾರ, ಸಚಿವರು ಮತ್ತು  ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಪತ್ರದಲ್ಲಿ ರ‍್ಯಾಪಿಡೋ ಆಟೋ ಚಾಲಕರು ದೂರಿದ್ದಾರೆ.

ನಮ್ಮ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕವಾಗಿ ಹೊಡೆತ ಬಿದ್ದಿದೆ. ಚಾಲಕರಿಗೆ ನ್ಯಾಯ ಕೊಡಿಸಬೇಕು,  ಇಲ್ಲದಿದ್ದರೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ಪತ್ರದಲ್ಲಿ ಅಳಲು ವ್ಯಕ್ತಪಡಿಸಿದ್ದಾರೆ.  ಆನ್ ಲೈನ್ ದ್ವಿಚಕ್ರ ಬೈಕ್ ಟ್ಯಾಕ್ಸಿಗಳ ಹಾವಳಿ ಹೆಚ್ಚಾಗಿದೆ.  ಟ್ಯಾಕ್ಸಿ ಮತ್ತು ಗೂಡ್ಸ್ ವೆಹಿಕಲ್ಸ್ ಗಳ ಬಳಿ ಶೇ. 30% ಕಮೀಷನ್ ತೆಗೆದುಕೊಳ್ಳುತ್ತಿದ್ದಾರೆ. ವೈಟ್ ಬೋರ್ಡ್ ಕಾರುಗಳಿಂದ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *