Menu

ರೇಪ್‌ ವೀಡಿಯೊ ಬೆದರಿಕೆ: ಬೆಳಗಾವಿಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿ ಮೇಲೆ ಮತ್ತೆ ಗ್ಯಾಂಗ್‌ ರೇಪ್‌

ಹದಿನೈದು ವರ್ಷದ ಬಾಲಕಿ ಮೇಲೆ ಆರು ಜನರ ಗ್ಯಾಂಗ್​ ಎರಡು ಬಾರಿ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ನಗರ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯ ಗುಡ್ಡದಲ್ಲಿ ನಡೆದಿದೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್​ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ. ಎ1 ಸೇರಿ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಆರು ತಿಂಗಳ ಹಿಂದೆ ಸ್ನೇಹಿತ ಬಾಲಕಿಯನ್ನು ಪುಸಲಾಯಿಸಿ ಗುಡ್ಡಕ್ಕೆ ಕರೆದೊಯ್ದು ಆರು ಮಂದಿ ಸೇರಿ ಅತ್ಯಾಚಾರ ಮಾಡಿದ್ದರು. ದುಷ್ಕರ್ಮಿಗಳು ಆ ಅತ್ಯಾ ಚಾರದ ವೀಡಿಯೊ ಮಾಡಿಕೊಂಡಿದ್ದಾರೆ. ಅದೇ ವೀಡಿಯೊ ಇಟ್ಟುಕೊಂಡು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಕೂಡ ವೀಡಿಯೊ ಮಾಡಿಕೊಂಡಿದ್ದಾರೆ. ಅದೇ ವೀಡಿಯೊ ಇಟ್ಟುಕೊಂಡು ಇದೀಗ ಮತ್ತೆ ಬಾಲಕಿಯನ್ನು ಬೆದರಿಸಿದ್ದು, ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ವಾರದ ಹಿಂದಷ್ಟೇ ಬೆಳಗಾವಿಯ ಹೊರವಲಯದ ರೆಸಾರ್ಟ್​​ನಲ್ಲಿ ಗ್ಯಾಂಗ್​​ರೇಪ್​ ನಡೆದಿದ್ದು, ಪೊಲೀಸ್ ಅಧಿಕಾರಿಯ ಪುತ್ರ ಭಾಗಿಯಾಗಿದ್ದ ಆರೋಪ ಕೇಳಿಬಂದಿತ್ತು. ಮೂವರು ವಿದ್ಯಾರ್ಥಿಗಳು ರೆಸಾರ್ಟ್ ಒಂದರಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಮತ್ತಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆಯಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

Related Posts

Leave a Reply

Your email address will not be published. Required fields are marked *