Wednesday, August 06, 2025
Menu

ಮಗುವಿನ ಮೇಲೆ ರೇಪ್‌: ಬೆಳಗಾವಿಯ ಮೌಲ್ವಿ ಜೈಲಿಗೆ

2023ರ ಅಕ್ಟೋಬರ್​ನಲ್ಲಿ ಬೆಳಗಾವಿಯ ಮೌಲ್ವಿಯು ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವಂತಹ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆದ ಬಳಿಕ ಬಾಲಕಿಯ ಪೋಷಕರನ್ನು ಹುಡುಕಿ ಪೊಲೀಸರು ಕೇಸ್ ದಾಖಲಿಸಿಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

ಮುರಗೋಡ ಪೊಲೀಸರು ಮಹಾಲಿಂಗಪುರದ ಮೌಲ್ವಿ ತುಫೇಲ್ ಅಹ್ಮದ್ ದಾದಾಪೀರ್​​ (22) ಎಂಬಾತನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಹಾಕಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಘಟನೆ ನಡೆದು ಎರಡು ವರ್ಷ ಕಳೆದರೂ ಭಯ ಪಟ್ಟು ಬಾಲಕಿಯ ಪೋಷಕರು ಕೇಸ್ ಹಾಕಿರಲಿಲ್ಲ, ವೀಡಿಯೊ ಸಿಗುತ್ತಿದ್ದಂತೆ ಪೊಲೀಸರೇ ಬಾಲಕಿಯ ತಂದೆಯ ಮನವೊಲಿಸಿ ಕೇಸ್ ದಾಖಲಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಎಂಬ ಎಕ್ಸ್​ ಖಾತೆಯಲ್ಲಿ ಘಟನೆಯ ವೀಡಿಯೊ ವೈರಲ್​ ಆಗಿತ್ತು. 2023 ಅಕ್ಟೋಬರ್​ 5ರಂದು ಬೆಳಗಾವಿ ಯರಗಟ್ಟಿ ಮಸೀದಿ ಒಂದರಲ್ಲಿ ಹೆಣ್ಣು ಮಗುವಿನ ಮೇಲೆ ನಡೆದಿರುವ ಈ ಅತ್ಯಾಚಾರಕ್ಕೆ ಮಗುವಿನ ತಂದೆ ನ್ಯಾಯ ಕೇಳುತ್ತಿದ್ದಾರೆ. ಮಸೀದಿಯವರು ಹೆದರಿಸಿ ದೂರು ಕೊಡದಂತೆ ತಡೆದಿದ್ದಾರಂತೆ. ಅವರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಕೂಡಲೇ ತನಿಖೆ ಮಾಡಿ ಕ್ರಮ ಜರುಗಿಸಿ ಆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ತಂದೆಯ ಹೆಸರು ಕುತುಬುದ್ದೀನ್​ ಎಂದು ಪೋಸ್ಟ್ ಆಗಿತ್ತು.

17 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣದಲ್ಲಿ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದರು.ಬಾಗಲಕೋಟೆಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Related Posts

Leave a Reply

Your email address will not be published. Required fields are marked *