Menu

ಎಲ್ಲೇ ಕಾಲ್ತುಳಿತ ಆದ್ರೂ ಎಲ್ಲರದ್ದೂ ಜೀವವೇ ಎಂದ ಸುರ್ಜೇವಾಲ

ಬಿಜೆಪಿಯವರು ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡ್ತಾರೆ, ಎಲ್ಲರ ಜೀವ ಮುಖ್ಯ, ಎಲ್ಲೇ ಕಾಲ್ತುಳಿತ ಆದ್ರೂ ಎಲ್ಲರದ್ದೂ ಜೀವ ಒಂದೇ ಆಗಿರುತ್ತದೆ ಎಂದು ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿ ರಂದೀಪ್‌  ಸುರ್ಜೇವಾಲಾ ಹೇಳಿದ್ದಾರೆ.

ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪುರಿ ಜಗನ್ನಾಥ್ ಕಾಲ್ತುಳಿತ ಪ್ರಕರಣದ ಬಗ್ಗೆ ಕರ್ನಾಟಕ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ನಾಯಕರು ಯಾಕೆ ಮಾತಾಡ್ತಿಲ್ಲ ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಮೂರು ಕಾಲ್ತಿಳಿತ ಘಟನೆಗಳಿಂದ ನಾವು ಪಾಠ ಕಲಿಯಬೇಕಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಸ್ಡೇಟ್ ಕ್ರೌಡ್ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು, ಕ್ರೌಡ್ ಮ್ಯಾನೇಜ್ಮೆಂಟ್ ಮಾಡಲು ದೇಶದಲ್ಲಿ ಮಾದರಿ ನಿಯಮಗಳ ರೂಪಿಸಬೇಕು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *