ಮುಂಬೈ: ಬಾಲಿವುಡ್ ನಟ ರಾಮಾಯಣ ಚಿತ್ರದ ಎರಡು ಭಾಗಗಳಲ್ಲಿ ನಟಿಸಲು ಭಾರೀ ಸಂಭಾವನೆ ಪಡೆದಿದ್ದು, ವೃತ್ತಿಜೀವನದಲ್ಲೇ ಅತೀ ದೊಡ್ಡ ಪಡೆದಿದ್ದಾರೆ ಎಂದು ಹೇಳಲಾಗಿದೆ.
ಅನಿಮಲ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ರಣಭೀರ್ ಕಪೂರ್ ರಾಮಾಯಣ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಒಪ್ಪಿಕೊಂಡಿದ್ದು, ಈ ಚಿತ್ರದ ಎರಡು ಭಾಗಗಳಲ್ಲಿ ನಟಿಸಲು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ.
ರಣಭೀರ್ ಕಪೂರ್ ಎರಡು ಭಾಗ ಅಂದರೆ ಒಂದು ಭಾಗದ ಚಿತ್ರಕ್ಕೆ 70ರಿಂದ 75 ಕೋಟಿ ರೂ.ನಂತೆ 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
ಕೆಜಿಎಫ್ ಯಶಸ್ಸಿನ ನಂತರ ಯಶ್ ಈ ಚಿತ್ರದಲ್ಲಿ ಸಂಭಾವನೆ ಬದಲು ನಿರ್ಮಾಪಕರಾಗಿಯೂ ಬಡ್ತಿ ಪಡೆದಿದ್ದಾರೆ. ಹಾಗಾಗಿ ಯಶ್ ಈ ಚಿತ್ರದ ಸಂಭಾವನೆ ಗಣನೆಗೆ ಬರುತ್ತಿಲ್ಲ.
ರಾಮಾಯಣ ಚಿತ್ರದಲ್ಲಿ ರಾಮನಾಗಿ ರಣಭೀರ್ ಕಪೂರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಸನ್ನಿ ಡಿಯೊಲ್ ಹನುಮಂತನಾಗಿ ಹಾಗೂ ರವಿ ದುಬೆ ಲಕ್ಷ್ಮಣನಾಗಿ ನಟಿಸುತ್ತಿದ್ದಾರೆ.
ಚಿತ್ರದ ಟೈಟಲ್ ಗ್ಲಿಪ್ಸ್ ಇತ್ತೀಚೆಗೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಅಂದರೆ ರಾಮಾಯಣ ಚಿತ್ರದಲ್ಲಿ ಎಆರ್ ರೆಹಮಾನ್ ಮತ್ತು ಹನ್ಸ್ ಸಿಮ್ಮರ್ ಇಬ್ಬರೂ ಸಂಗೀತ ನಿರ್ದೇಶನ ಮಾಡಲಿದ್ದಾರೆ.
ಚಿತ್ರತಂಡ ಈಗಾಗಲೇ 2026 ದೀಪಾವಳಿಗೆ ಮೊದಲ ಭಾಗ ಹಾಗೂ 2027ರ ದೀಪಾವಳಿಗೆ ಎರಡನೇ ಭಾಗದ ಚಿತ್ರದ ಬಿಡುಗೆ ಆಗಲಿದ್ದಾನೆ.