Tuesday, November 18, 2025
Menu

ಆಪರೇಷನ್ ಸಿಂಧೂರ್: ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಅಂದ್ರು ನಟ ಕಿಚ್ಚ ಸುದೀಪ್‌

ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ನ್ಯಾಯವನ್ನು ಒದಗಿಸಿದೆ ಎಂದು ಎಲ್ಲೆಡೆಯಿಂದ ಅಭಿನಂದನೆಗಳು ಸಲ್ಲುತ್ತಿವೆ. ಕನ್ನಡ ಚಿತ್ರ ರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಸಂದರ್ಭದಲ್ಲಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿ, ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಎಂಬ ಸಾಲನ್ನು ಸಾಮಾ ಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. As an

“ಆಪರೇಷನ್ ಸಿಂಧೂರ್” ಬಳಿಕ ರಾಜ್ಯದ ಡ್ಯಾಂ, ಏರ್‌ಪೋರ್ಟ್‌ಗಳಿಗೆ ಬಿಗಿ ಭದ್ರತೆ: ಸಚಿವ ಪರಮೇಶ್ವರ್‌

ಭಾರತದ ವಾಯುಪಡೆಯು ಉಗ್ರರ ತಾಣಗಳ ಮೇಲೆ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ಸೂಚನೆಯನ್ವಯ  ರಾಜ್ಯದಲ್ಲೂ ನಾಗರಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಡ್ಯಾಮ್‌ಗಳಿಗೆ ಹೆಚ್ಚಿನ ಭದ್ರತೆ

ಆಪರೇಷನ್ ಸಿಂಧೂರ್‌: ಉಗ್ರರ ನೆಲೆಗಳ ನಾಶ, ಸೇನಾಪಡೆಗೆ ಅಭಿನಂದನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದೇಶದ ಸೇನಾಪಡೆಯು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ಪರಾಕ್ರಮ ಮೆರೆದಿದೆ,  ರಾಜ್ಯದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾವೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸೇನೆಯನ್ನು ಅಭಿನಂದಿಸಿದ ಮುಖ್ಯಮಂತ್ರಿ,  ರಾಷ್ಟ್ರೀಯ ಭದ್ರತೆ ವಿಷಯಲ್ಲಿ ಯಾವುದೇ

ಸಾಹಿತಿ ಜಿ.ಎಸ್.ಸಿದ್ದಲಿಂಗಯ್ಯ ನಿಧನ

ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕ್ರಿಯಾಶೀಲವಾಗಿ ಸೇವೆ ಸಲ್ಲಿಸಿದ್ದ ಜಿ.ಎಸ್.ಸಿದ್ದಲಿಂಗಯ್ಯ(94) ಬೆಂಗಳೂರಿನ  ವಿಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ತುಮಕೂರು ಜಿಲ್ಲೆ ಬೆಳ್ಳಾವಿಯವರಾದ ಸಿದ್ದಲಿಂಗಯ್ಯ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದರು. ಕುವೆಂಪು ಅವರ ನೆಚ್ಚಿನ

ಕೆಪಿಎಸ್‌ಸಿ ಕರ್ಮಕಾಂಡದ ಸಮಗ್ರ ತನಿಖೆಗೆ ಸಚಿವ ಪ್ರಲ್ಹಾದ ಜೋಷಿ ಆಗ್ರಹ

ರಾಜ್ಯದ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಕೆಪಿಎಸ್‌ಸಿ ಕರ್ಮಕಾಂಡ ಬಗ್ಗೆ ರಾಜ್ಯ ಸರ್ಕಾರ ಕೂಡಲೇ ಸಮಗ್ರ ತನಿಖೆಗೆ ಆದೇಶಿಸಬೇಕು ಮತ್ತು ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ. ಕೆಪಿಎಸ್‌ಸಿ ಸಂಸ್ಥೆಯ ಪರೀಕ್ಷೆ ಪ್ರಹಸನಗಳು ಒಂದೆರೆಡಲ್ಲ, ಬೆಳಗ್ಗೆ ಪರೀಕ್ಷೆ

ಪಹಲ್ಗಾಮ್ ದಾಳಿಗೆ “ಆಪರೇಷನ್‌ ಸಿಂಧೂರ” ಸೂಕ್ತ ಪ್ರತ್ಯುತ್ತರವೆಂದ ಡಿ.ಕೆ ಶಿವಕುಮಾರ್‌

ಹೇಡಿತನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ “ಆಪರೇಷನ್‌ ಸಿಂಧೂರ” ಸೂಕ್ತ ಪ್ರತ್ಯುತ್ತರ. ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಎಂಬುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಡಿಸಿಎಂ ಭಯೋತ್ಪಾದಕತೆಯನ್ನು ಬಗ್ಗುಬಡಿಯಲು ಸನ್ನದ್ಧವಾಗಿರುವ

ಅಂಬೇಡ್ಕರ್ ಬರೆದಿದ್ದ ಪತ್ರ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ, ಛಲವಾದಿಯ ರಾಜೀನಾಮೆಗೆ ಒತ್ತಾಯ

ಸಾವರ್ಕರ್ ಅವರೇ ತಮ್ಮ ಸೋಲಿಗೆ ಕಾರಣ ಎಂದು ಡಾ.ಬಿ.ಆರ್.ಅಂಬೇಡ್ಕರ್ ‌ ಅವರು ಕಮಲಕಾಂತ್‌ ಎನ್ನುವವರಿಗೆ ಬರೆದಿರುವ ಕೈಬರಹದ ಪತ್ರ ಬಿಡುಗಡೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರ ಸವಾಲಿಗೆ ತಿರುಗೇಟು ನೀಡಿ ಸವಾಲಿನಂತೆ  ನಾರಾಯಣಸ್ವಾಮಿ

ಅಕ್ರಮ ಗಣಿಗಾರಿಕೆ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು, ಶಾಸಕ ಸ್ಥಾನಕ್ಕೆ ಕಂಟಕ

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಗಂಗಾವತಿ ಶಾಸಕ ಜನಾರ್ದನ ರೆಡ್ಡಿ  ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ  ತೀರ್ಪು ನೀಡಿದ್ದು, ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅವರು ಗಂಗಾವತಿ ಶಾಸಕ ಸ್ಥಾನವನ್ನು  ಕಳೆದುಕೊಳ್ಳುವ ಸಾಧ್ಯತೆ ಇದೆ. ಆಂಧ್ರಪ್ರದೇಶದ ಓಬಳಾಪುರಂನಲ್ಲಿ ನಡೆದ ಗಣಿಗಾರಿಕೆ ಪ್ರಕರಣಕ್ಕೆ

ವೀಡಿಯೊ ಪೋಸ್ಟ್‌ ಮಾಡಿ ಸಿಎಂಗೆ ಅವಹೇಳನಗೈದ ಪೇದೆ ಅಮಾನತು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪೋಸ್ಟ್‌ ಮಾಡಿದ್ದ ಕೇಂದ್ರ ಕಾರಾಗೃಹದ ಕಾನ್‌ಸ್ಟೆಬಲ್ ಎಚ್.ಎನ್.ಮಧು ಕುಮಾ‌ರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್ ಆದೇಶಿಸಿದ್ದಾರೆ. ಸಿಎಂ ಅವರು ಬೆಳಗಾವಿಯಲ್ಲಿ ಪೊಲೀಸ್ ಅಧಿಕಾರಿ ವಿರುದ್ಧ ಕೈ ಎತ್ತಿದ

ಬಿಜೆಪಿ ಅಧಿಕಾರದಲ್ಲಿದ್ದಾಗ ಸುಹಾಸ್‌ ಶೆಟ್ಟಿ ರೌಡಿ ಶೀಟರ್‌, ಈಗ ಮಹಾತ್ಮ: ದಿನೇಶ್‌ ಗುಂಡೂರಾವ್‌

ಹಿಂದೂ ಕಾರ್ಯಕರ್ತ ಎನ್ನಲಾದ ಸುಹಾಸ್‌ ಶೆಟ್ಟಿ ಮೇಲೆ ರೌಡಿಶೀಟರ್ ಓಪನ್ ಮಾಡಿದ್ದೇ ಬಿಜೆಪಿ ಅವಧಿಯಲ್ಲಿ, ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿರುವ ಬಿಜೆಪಿ ನಾಯಕರ ಗಮನಕ್ಕೆ ಇದು ಎಂದು ಹೇಳಿರುವ ಸಚಿವ ದಿನೇಶ್‌ ಗುಂಡೂರಾವ್‌ ಸುಹಾಸ್‌