Tuesday, November 18, 2025
Menu

ಪಹಲ್ಗಾಮ್ ದಾಳಿಯ ಮಾಸ್ಟರ್‌ ಮೈಂಡ್‌ಗೆ ಇದ್ಯಾ ಕರ್ನಾಟಕ, ಕೇರಳ ಲಿಂಕ್?

ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಎಂದು ಗುರುತಿಸಲಾಗಿರುವ ಉಗ್ರ ಶೇಖ್ ಸಜ್ಜದ್ ಗುಲ್‌/ ಸಜ್ಜದ್ ಅಹ್ಮದ್ ಶೇಖ್ ಗೆ ಕರ್ನಾಟಕ ಮತ್ತು ಕೇರಳದ ಲಿಂಕ್ ಇರುವುದು ಬಯಲಾಗಿದೆ. ಪಹಲ್ಗಾಮ್ ದಾಳಿಯಲ್ಲಿ 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಹೆಸಿರನಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಪಹಲ್ಗಾಮ್ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಶಾಖೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ಹೊತ್ತುಕೊಂಡಿದೆ. ಉಗ್ರ ಶೇಖ್ ಸಜ್ಜದ್

ರಾಜ್ಯದ ಕರಾವಳಿಗಳಲ್ಲಿ ಹೈಅಲರ್ಟ್, ವಿದೇಶಿ ಹಡಗುಗಳ ತೀವ್ರ ತಪಾಸಣೆ , ಆಳ ಮೀನುಗಾರಿಕೆಗೆ ತಡೆ

ಉಗ್ರರ ತಾಣಗಳ ಮೇಲೆ ಭಾರತದ ವಾಯುಪಡೆ ದಾಳಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಪ್ರಮುಖ ನಗರಗಳು, ಬಂದರು, ವಿಮಾನ ನಿಲ್ದಾಣಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅದೇ ರೀತಿ ರಾಜ್ಯದ ಕರಾವಳಿಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಕಾರವಾರದಲ್ಲಿ ಕದಂಬ ನೌಕಾ

ಆಪರೇಷನ್ ಸಿಂಧೂರಕ್ಕೆ ಸಚಿವ ಬೈರತಿ ಸುರೇಶ್ ಪ್ರಶಂಸೆ

ಬೆಂಗಳೂರು: ಪೆಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ಭಯೋತ್ಪಾದಕರ ಕುಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ದೇಶದ ಪರಾಕ್ರಮ ಮೆರೆದಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಉಸ್ತುವಾರಿ

ಭಾರತೀಯ ಸೇನೆ ಕಾರ್ಯಾಚಾರಣೆ ಬಗ್ಗೆ ಹೆಮ್ಮೆಯಿದೆ: ಡಿಸಿಎಂ ಡಿಕೆ ಶಿವಕುಮಾರ್ ಶ್ಲಾಘನೆ

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಶಿವಕುಮಾರ್ ಅವರು ಎಕ್ಸ್ ಖಾತೆ

ಧಾರವಾಡ ಸೇರಿ ದೇಶದ 5 ಐಐಟಿಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ನವದೆಹಲಿ: ರಾಜ್ಯದ ಧಾರವಾಡ ಐಐಟಿ ಸೇರಿದಂತೆ ದೇಶದ 5 ಐಐಟಿಗಳಲ್ಲಿ ₹ 11,828.79 ಕೋಟಿ ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ

ಸೇನೆಗೆ ಧೈರ್ಯ ತುಂಬಲು ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನ ನೆಲದಲ್ಲಿ ನೆಲೆಯೂರಿದ್ದ ಭಯೋತ್ಪಾದಕರ ತಾಣಗಳ ಮೇಲೆ ಆಪರೇಷನ್‌ ಸಿಂಧೂರ ಕಾರ್ಯಾಚರನೆಯ ಮೂಲಕ ದಾಳಿ ನಡೆಸಿ ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನಾ ಕಾರ್ಯಾಚರಣೆಗೆ ಇನ್ನಷ್ಟು ಸ್ಥೈರ್ಯ ತುಂಬಲು ರಾಜ್ಯದ ಎಲ್ಲ

ಆಪರೇಷನ್ ಸಿಂಧೂರ್: ಕರ್ನಾಟಕದಿಂದ ಐದು ರಾಜ್ಯಗಳಿಗೆ ವಿಮಾನ ಸಂಚಾರ ರದ್ದು

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆಯಿಂದ ದಾಳಿ ನಡೆದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಿಂದ ಐದು ರಾಜ್ಯಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ

‘ಆಪರೇಷನ್ ಸಿಂಧೂರ್ ‘ ನಮ್ಮ ಸೇನೆ ನಮ್ಮ ಹೆಮ್ಮೆ: ಸಚಿವ ಜಮೀರ್ ಅಹಮದ್ 

ಪಹಲ್ಗಾಮ್‌ ದಾಳಿಯಲ್ಲಿ ಅಮಾಯಕರ ಜೀವ ಪಡೆದ ಪಾಕಿಸ್ತಾನ ಉಗ್ರರ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್ ‘ ನಡೆಸಿ ತನ್ನ ಶಕ್ತಿ ಹಾಗೂ ಪರಾಕ್ರಮ ತೋರಿಸಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್  ಅಭಿನಂದನೆ

ಆಪರೇಷನ್ ಸಿಂಧೂರ್: ‘ಭಾರತ ಕ್ಷಮಿಸಲ್ಲ, ಮರೆಯಲ್ಲ’ ಅಂದ್ರು ನಟ ಕಿಚ್ಚ ಸುದೀಪ್‌

ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಪಹಲ್ಗಾಮ್ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಭಾರತೀಯರಿಗೆ ನ್ಯಾಯವನ್ನು ಒದಗಿಸಿದೆ ಎಂದು ಎಲ್ಲೆಡೆಯಿಂದ ಅಭಿನಂದನೆಗಳು ಸಲ್ಲುತ್ತಿವೆ. ಕನ್ನಡ ಚಿತ್ರ ರಂಗದ ಅಭಿನಯ ಚಕ್ರವರ್ತಿ

“ಆಪರೇಷನ್ ಸಿಂಧೂರ್” ಬಳಿಕ ರಾಜ್ಯದ ಡ್ಯಾಂ, ಏರ್‌ಪೋರ್ಟ್‌ಗಳಿಗೆ ಬಿಗಿ ಭದ್ರತೆ: ಸಚಿವ ಪರಮೇಶ್ವರ್‌

ಭಾರತದ ವಾಯುಪಡೆಯು ಉಗ್ರರ ತಾಣಗಳ ಮೇಲೆ “ಆಪರೇಷನ್ ಸಿಂಧೂರ್” ಕಾರ್ಯಾಚರಣೆ ನಡೆಸಿದ ಬಳಿಕ ಕೇಂದ್ರ ಸರ್ಕಾರದ ಸೂಚನೆಯನ್ವಯ  ರಾಜ್ಯದಲ್ಲೂ ನಾಗರಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ. ರಾಜ್ಯದ ವಿಮಾನ ನಿಲ್ದಾಣಗಳು ಮತ್ತು ಡ್ಯಾಮ್‌ಗಳಿಗೆ ಹೆಚ್ಚಿನ ಭದ್ರತೆ