ರಾಜ್ಯ
ಸರ್ವಪಕ್ಷ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು: ಸಿಎಂ
ಇಂದಿರಾ ಗಾಂಧಿ ರೀತಿ ಯುದ್ಧ ಮಾಡಬೇಕು ಎಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇಂದಿರಾ ಗಾಂಧಿ ಸಮಯದ ಯುದ್ಧ ಆಗಿ ತುಂಬಾ ವರ್ಷಗಳೇ ಆಗಿವೆ. ಸದ್ಯಕ್ಕೆ ಈಗ ನಾನು ಆ ಬಗ್ಗೆ ಏನು ಹೇಳಲ್ಲ. ಸರ್ವಪಕ್ಷ ಸಭೆ ಹಾಗೂ ಸಂಸತ್ ಸದಸ್ಯರ ಸಭೆ ಮಾಡಿ ಕದನ ವಿರಾಮ ಘೋಷಣೆ ಮಾಡಬೇಕಿತ್ತು ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಎಚ್.ಡಿ.ಕೋಟೆಯಲ್ಲಿ ಮಾತನಾಡಿದ ಅವರು, ಭಾರತ – ಪಾಕಿಸ್ತಾನ ನಡುವೆ
ಮೇ 20ಕ್ಕೆ ಕಾಂಗ್ರೆಸ್ ಸರ್ಕಾರದ 2 ವರ್ಷದ ಸಂಭ್ರಮಾಚರಣೆ
ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಎರಡನೇ ವರ್ಷಾಚರಣೆ ಸಂಭ್ರಮವನ್ನು ಮುಂದೂಡಲು ಆಲೋಚನೆ ಮಾಡಿದ್ದೆವು. ಆದರೆ ಈಗ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಿದ್ದೇವೆ. ಐದಾರು ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಹಾಗೂ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರು
ಸೈಬರ್ ದಾಳಿಗಳ ಬಗ್ಗೆ ನಾಗರಿಕರು ಎಚ್ಚರ ವಹಿಸಿ: ಪೊಲೀಸ್ ಕಮಿಷನರ್ ಬಿ. ದಯಾನಂದ್
ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೈಬರ್ ದಾಳಿಗಳ ಸಾಧ್ಯತೆ ಬಗ್ಗೆ ನಾಗರಿಕರು ಎಚ್ಚರ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ. ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳು, ಇ-ಮೇಲ್‌ಗಳು, ಮತ್ತು ದುರುದ್ದೇಶಪೂರಿತ ಫೈಲ್‌ಗಳ ಮೂಲಕ ಡೇಟಾ ಕದಿಯಲು
ಕಂದಾಯ ಭೂಮಿಯಲ್ಲಿ ವಾಸವಿರುವ ಹಟ್ಟಿ, ತಾಂಡಾಗಳ 1 ಲಕ್ಷ ಜನರಿಗೆ ಪಟ್ಟಾ ಖಾತೆ
“ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೇ.20 ರಂದು ವಿಜಯನಗರದಲ್ಲಿ ನಡೆಯುವ ಸಮಾವೇಶದಲ್ಲಿ ತಾಂಡಾ, ಹಟ್ಟಿ ಸೇರಿದಂತೆ ಕಂದಾಯ ಭೂಮಿಯಲ್ಲಿ ವಾಸವಿರುವ 1 ಲಕ್ಷ ಜನರಿಗೆ ಪಟ್ಟಾ ಖಾತೆ ನೀಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ. ರಾಮನಗರದಲ್ಲಿ ನಡೆದ ಜಿಲ್ಲಾ
ರಾಮನಗರ ಜಿಲ್ಲೆಯ ಅಭಿವೃದ್ಧಿಗೆ 500 ಕೋಟಿಗೂ ಹೆಚ್ಚು ಅನುದಾನ: ಡಿ.ಕೆ.ಶಿವಕುಮಾರ್
“ರಾಮನಗರ ಪಟ್ಟಣ ಪ್ರದೇಶದ ಅಭಿವೃದ್ಧಿಗೆ ರೂ.150 ಕೋಟಿ, ನೀರಾವರಿ ಇಲಾಖೆಯಿಂದ ರೂ. 400 ಕೋಟಿ ಅನುದಾನ ನೀಡಲಾಗಿದೆ. ಸತ್ತೇಗಾಲದಿಂದ ರಾಮನಗರ ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಯೋಜನೆ ತರಲಾಗುತ್ತಿದೆ. ಜಿಲ್ಲಾ ಕೇಂದ್ರಕ್ಕೆ ಹೊಸರೂಪ ನೀಡಲಾಗುವುದು,” ಎಂದು ಡಿಸಿಎಂ ಡಿ.ಕೆ. ಶಿವ ಕುಮಾರ್
ದೆಹಲಿ-ಬೆಂಗಳೂರು ರೈಲಿಗೆ ಬಾಂಬ್ ಬೆದರಿಕೆ ಕರೆ: ಆರೋಪಿ ಸೆರೆ
ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕೆಕೆ ಎಕ್ಸ್ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ. ಮಧ್ಯರಾತ್ರಿ ಒಂದು ಗಂಟೆಗೆ ಹುಸಿ ಬಾಂಬ್ ಕರೆ ಬಂದ ಕೂಡಲೇ ವಾಡಿ ಜಂಕ್ಷನ್ ಬಳಿ ರೈಲ್ವೆ ಪೊಲೀಸರು ತಪಾಸಣೆ ನಡೆಸಿ ಹುಸಿಬಾಂಬ್
ಅರ್ಚಕರ ಮತ್ತು ಉಪಾಧಿವಂತರ ಒಕ್ಕೂಟದಿಂದ ರಾಜ್ಯಪಾಲರ ವಿರುದ್ಧ ಸುದ್ದಿಗೋಷ್ಠಿ
ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದಿಂದ ರಾಜ್ಯಪಾಲರ ವಿರುದ್ಧ ಸುದ್ದಿಗೋಷ್ಠಿ ನಡೆಯಿತು. ಮುಜರಾಯಿ ಕಾನೂನು ತಿದ್ದುಪಡಿ ಕಾಯ್ದೆಯನ್ನು ರಾಜ್ಯಪಾಲರು ತಡೆ ಹಿಡಿಯುತ್ತಿ ದ್ದಾರೆ ಎಂಬುದು ಒಕ್ಕೂಟದ ಆರೋಪ. ಮುಜರಾಯಿ ತಿದ್ದುಪಡಿ ಕಾಯ್ದೆ ಉಭಯ ಸದನಗಳಲ್ಲಿ ಸಮ್ಮತಿ ಪಡೆದಿದೆ,
ಆಹಾರ ಧಾನ್ಯ ಕೃತಕ ಅಭಾವ ಆಗದಂತೆ ನಿಗಾ ವಹಿಸಲು ಸಿಎಂ ಸೂಚನೆ
ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನತೆಯ ಸನ್ನಿವೇಶದಲ್ಲಿ ಕೃತಕ ಅಭಾವ ಸೃಷ್ಟಿ ಮಾಡಿ ಆಹಾರ ಧಾನ್ಯ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಪ್ರಯತ್ನ ಮಾಡಬಹುದು. ಇಂತಹ ಕಾಳಸಂತೆಕೋರರ ಬಗ್ಗೆ ನಿಗಾ ವಹಿಸಬೇಕು. ಪರಿಸ್ಥಿತಿಯ ಲಾಭ ಪಡೆದು ಆಹಾರ ಧಾನ್ಯಗಳ ಬೆಲೆ
ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ಶವ ಪತ್ತೆ
ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢವಾಗಿ ಮೃತಪಟ್ಟಿದ್ದು, ಅವರ ಶವ ಶ್ರೀರಂಗ ಪಟ್ಟಣದ ಸಾಯಿ ಆಶ್ರಮ ಬಳಿ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಈ ಸಾವು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಮೈಸೂರಿನ ಅಪಾರ್ಟ್‍ಮೆಂಟ್ ಒಂದರಲ್ಲಿ ಪತ್ನಿ ಜೊತೆ ವಾಸವಾಗಿದ್ದ
ಸಾಲ ಶಿಸ್ತಿನಿಂದ ಮರುಪಾವತಿ ಆಗುತ್ತಿರುವುದು ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಾತ್ರ: ಡಿಸಿಎಂ
ರಾಜ್ಯದಲ್ಲಿ ಅತಿ ಹೆಚ್ಚು ಶಿಸ್ತಿನಿಂದ ಬ್ಯಾಂಕು, ಸಹಕಾರಿ ಸಂಘಗಳಲ್ಲಿ ಸಾಲಗಳು ಮರುಪಾವತಿ ಮಾಡುತ್ತಿದ್ದರೆ ಅದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ. ಇಲ್ಲಿ ಕೊಟ್ಟ ಮಾತುಗಳನ್ನು ನಾವೂ ಉಳಿಸಿಕೊಂಡು ಬರುತ್ತಿದ್ದೇವೆ. ಈ ಜಿಲ್ಲೆ ಬಗ್ಗೆ ಅಪಾರ ವಿಶ್ವಾಸ, ನಂಬಿಕೆ ಇಟ್ಟುಕೊಂಡಿದ್ದೇನೆ. ಇಲ್ಲಿನ




