Menu

ಅತೀ ಹೆಚ್ಚು ಸಾಲಗಾರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ!

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 88.3 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿವೆ ಎಂದು ಹೇಳಿದೆ. ರಾಜ್ಯಗಳ ಸಾಲ ಹೆಚ್ಚಾಗಲು ಪ್ರಮುಖವಾಗಿ ಕೊರೊನಾ ಸಾಂಕ್ರಮಿಕ ಹಾಗೂ ಜನಪರ ಯೋಜನೆಗಳು ಕಾರಣಗಳು ಎನ್ನಲಾಗಿದೆ. ಹಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳು ಘೋಷಣೆಯಾಗಿರುವುದು ಆ ರಾಜ್ಯಗಳ ಸಾಲದ ಪ್ರಮಾಣ ಗಮನಾರ್ಹ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳು

ವಿಧಾನಸೌಧ, ರಾಜ್ಯಭವನಕ್ಕೆ ತೆರಿಗೆ ಬಾಕಿ ನೋಟಿಸ್ ಜಾರಿ!

ರಾಜ್ಯ ಸರ್ಕಾರದ ಆಡಳಿತ ಕೇಂದ್ರ ವಿಧಾನಸೌಧ, ರಾಜ್ಯಪಾಲರ ನಿವಾಸ ಅಥವಾ ರಾಜಭವನ, ಮತ್ತು ವಿಕಾಸಸೌಧ ಸೇರಿದಂತೆ 258 ಸರ್ಕಾರಿ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಸದಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ಜಾರಿ ಮಾಡಿದೆ. ಕೆಲವು ಇಲಾಖೆಗಳು ಸುಮಾರು

ಹಳ್ಳಿ ಭಾಷೆಯಲ್ಲಿ ಹೇಳಿದ್ದೇನೆ, ಹೊಸ ಭಾಷೆ ಇದ್ದರೆ ಕಲಿಸಿಕೊಡಿ: ಚಿತ್ರರಂಗದ ಗಣ್ಯರ ಅಸಮಾಧಾನಕ್ಕೆ ಡಿಕೆಶಿ ತಿರುಗೇಟು

“ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ” ಎಂದು

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ  ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ:  ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಡಿಸಿಎಂ

ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಮದುವೆ ಫೋಟೊ ವೈರಲ್!

ಮಹಿಳಾ ಬಾಡಿ ಬಿಲ್ಡರ್ ಖ್ಯತ ಚಿತ್ರಾಪುರುಷೋತ್ತಮ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬೆನ್ನಲ್ಲೇ ಅವರ ಸಾಂಪ್ರದಾಯಿಕ ಸೀರೆಯಲ್ಲೂ ಬಾಡಿಬಿಲ್ಡ್ ಫೋಟೊ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ. ಕನ್ನಡದ ಖ್ಯಾತ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ವಿಶಿಷ್ಟ ವಧುವಿನ ಲುಕ್ನಿಂದಾಗಿ ಗಮನ ಸೆಳೆದಿದ್ದಾರೆ.

ಟೊಮೆಟೊ ಸಾಸ್ ನಲ್ಲಿ ಅಪಾಯಕಾರಿ ಬೆಂಜೊಯೆಟ್ ರಾಸಾಯನಿಕ: ಲ್ಯಾಬ್ ವರದಿಯಲ್ಲಿ ದೃಢ

ಆಹಾರ ಪ್ರಿಯರು ಬಾಯಿ ಚಪ್ಪರಿಸಿ ಸವಿಯುವ ಟೊಮೆಟೊ ಸಾಸ್ಗೆ ಅಪಾಯಕಾರಿ ರಾಸಾಯಾನಿಕ ಬಳಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ದೃಢವಾಗಿದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ವರದಿ ಹೇಳಿದೆ. ವಿವಿಧ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಬಳಕೆಯಾಗುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ

ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಹತ್ತು ಸೆಕೆಂಡ್‌ಗಳಲ್ಲಿ ಸ್ಪೆಷಲ್‌ ಪರ್ಮಿಟ್

ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಟೂರಿಸ್ಟ್ ವಾಹನಗಳಿಗೆ ಬೇಕಿದ್ದ  ಸ್ಪೆಷಲ್ ಪರ್ಮಿಟ್ ನಿಯಮಗಳನ್ನು ಆರ್‌ಟಿಒ ಸರಳಗೊಳಿಸಿದೆ. ಇನ್ಮುಂದೆ ಹತ್ತೇ ಸೆಕೆಂಡ್‌ಗಳಲ್ಲಿ ಸ್ಪೆಷಲ್ ಪರ್ಮಿಟ್ ವಾಹನ ಸವಾರರಿಗೆ ಸಿಗಲಿದೆ. ಯೆಲ್ಲೋ ಬೋರ್ಡ್ ವಾಹನಗಳು ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ

ಹುಣಸೂರು ತೋಟದ ಮನೆಯಲ್ಲಿ ವೃದ್ಧ ದಂಪತಿಯ ಹತ್ಯೆ

ಹುಣಸೂರು ತಾಲೂಕಿನ ನಾಡಪ್ಪನಹಳ್ಳಿಯ ತೋಟದ ಮನೆಯಲ್ಲಿ ಹಾಡಹಗಲೇ ಕಲ್ಲಿನಿಂದ ಜಜ್ಜಿ ವೃದ್ಧ ದಂಪತಿಯನ್ನು ಕೊಲೆ ಮಾಡಿರುವುದು ಪತ್ತೆಯಾಗಿದೆ. ನಾಡಪ್ಪನಹಳ್ಳಿ ಗ್ರಾಮದ ರಂಗಸ್ವಾಮಿಗೌಡ(65) ಹಾಗೂ ಪತ್ನಿ ಶಾಂತಮ್ಮ (52) ಕೊಲೆಯಾದವರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳಿದ್ದಾರೆ. ಮಗ ದೇವರಾಜ್

ರೈತರಿಂದ ಖರೀದಿಸುವ ಆಹಾರ ಧಾನ್ಯಗಳ ಗುಣಮಟ್ಟ ಕಾಪಾಡಬೇಕು: ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕರು, ಜಿಲ್ಲೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಖರೀದಿ ಎಜೆನಸ್ಸಿ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದದ ಮೂಲಕ ಸಭೆಯನ್ನು ನಡೆಸಿದರು. ಕನಿಷ್ಠ ಬೆಂಬಲ

ಹಣಕಾಸಿನ ಪರಿಸ್ಥಿತಿ ಅವಲೋಕಿಸಿ ಗುತ್ತಿಗೆದಾರರ ಬಾಕಿ ಬಿಲ್ಲುಗಳ ಬಗ್ಗೆ ಕ್ರಮ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸರ್ಕಾರದಲ್ಲಿನ ಹಣಕಾಸಿನ ಪರಿಸ್ಥಿತಿಯನ್ನು ಅವಲೋಕಿಸಿ, ಗುತ್ತಿಗೆದಾರರ ಬಾಕಿ ಬಿಲ್ಲುಗಳ ಪಾವತಿ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ,