Menu

ರಜತ್ ಮತ್ತೆ ಜೈಲಿಗೆ, ವಿಜಯ್ ಗೆ 500 ರೂ. ದಂಡ

ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣದಲ್ಲಿ ರಜತ್‌ ನೀಡಿದ್ದ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಬಿಜಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಅವರನ್ನು ಪೊಲೀಸರು ಬಂಧಿಸಿದರೆ, ವಿಜಯ್ ಗೌಡಗೆ 500 ರೂ. ದಂಡ ವಿಧಿಸಲಾಗಿದೆ.

24ನೇ ಎಸಿಎಂಎಂ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ರಜತ್ ಬಂಧಿಸಿದ ಬಸವೇಶ್ವರ ನಗರ ಪೊಲೀಸರು  ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದೇ ವೇಳೆ ವಿಜಯ್ ಗೌಡ ಬಂಧನಕ್ಕೆ ಪೊಲೀಸರು ಯತ್ನಿಸಿದ್ದು, ವಿನಯ್ ವಕೀಲರ ಜೊತೆ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆಯಾಚಿಸಿದ್ದರಿಂದ 500 ರೂ. ದಂಡ ವಿಧಿಸಲಾಗಿದೆ.

ವಾರಂಟ್ ರಿಕಾಲ್ ಆಗಿರುವುದರಿಂದ ವಿನಯ್‌ಗೆ ಈ ಕೇಸ್‌ನಿಂದ ರಿಲೀಫ್ ಸಿಕ್ಕಿದೆ. ಕೋರ್ಟ್‌ಗೆ ವಕೀಲರೊಂದಿಗೆ ಹಾಜರಾಗಿ ವಿನಯ್ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಸಹಕಾರ ನೀಡೋದಾಗಿ ತಿಳಿಸಿದರು. ಹಾಗಾಗಿ ವಿನಯ್‌ಗೆ 500 ರೂ. ದಂಡವನ್ನು 24ನೇ ಎಸಿಎಂಎಂ ನ್ಯಾಯಾಲಯ ವಿಧಿಸಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ವಿನಯ್ ಗೌಡ, ನಾನು ಅರ್ಜಿ ಹಾಕಿದ್ದಕ್ಕೆ ವಾರಂಟ್ ರಿಕಾಲ್ ಆಗಿತ್ತು. ನನಗೆ ವಾರಂಟ್ ಆಗಿರಲಿಲ್ಲ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದೇನೆ. ನನ್ನ ವಕೀಲರು ಇಂದು ಕೋರ್ಟ್ ಬರಲು ಹೇಳಿದ್ದರು. ಹಾಗಾಗಿ ಅವರೊಂದಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ರಜತ್ ಮೇಲೆ ಸಿಟ್ಟಿಲ್ಲ. ಕೋರ್ಟ್ ಆದೇಶಕ್ಕೆ ನಾವು ಗೌರವ ನೀಡಬೇಕಾಗತ್ತದೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *