Menu

ಎಐ, ಕ್ವಾಂಟಂ, ಸೈಬರ್ ಸೆಕ್ಯುರಿಟಿ ಸಹಕಾರಕ್ಕೆ ಬವೇರಿಯಾ ಜತೆ ರಾಜ್ಯದ ಒಡಂಬಡಿಕೆ

ಎಐ, ಕ್ವಾಂಟಂ ತಂತ್ರಜ್ಞಾನ, ಬಿಟಿ, ಸ್ಮಾರ್ಟ್ ಸಿಟಿ, ಉನ್ನತ ಶಿಕ್ಷಣ ಮತ್ತು ಸುಸ್ಥಿರ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಉದ್ದೇಶದಿಂದ ಜರ್ಮನಿಯ ಬವೇರಿಯಾ ಪ್ರಾಂತ್ಯ ಮತ್ತು ರಾಜ್ಯ ಸರಕಾರಗಳು  ಒಡಂಬಡಿಕೆಗೆ ಅಂಕಿತ ಹಾಕಿದವು. ರಾಜ್ಯ ಸರಕಾರದ ಪರವಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮತ್ತು ಬವೇರಿಯಾ ಪರವಾಗಿ ಅಲ್ಲಿಯ ಚಾನ್ಸಲರಿ ಮುಖ್ಯಸ್ಥ ಡಾ.ಪ್ಲೋರಿಯನ್ ಹರ್ಮನ್ ಬೆಂಗಳೂರಿನಲ್ಲಿ  ಸಹಿ ಹಾಕಿದರು. ಈ ಸಂದರ್ಭದಲ್ಲಿ

ಅವರವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದಾರೆ: ಡಿ.ಕೆ.ಶಿವಕುಮಾರ್

“ವೀರಶೈವ ಮಹಾಸಭಾದವರು ಅವರ ಸಮಾಜ ರಕ್ಷಣೆ ಮಾಡಿಕೊಳ್ಳಲು ಹೊರಟಿದ್ದು, ಅವರನ್ನು ನಾವು ಏಕೆ ಟೀಕೆ ಮಾಡಬೇಕು. ಪ್ರಜಾಪ್ರಭುತ್ವ, ಸಂವಿಧಾನದ ಪ್ರಕಾರವಾಗಿ ಅವರುಗಳು ತಮ್ಮ ನಿಲುವುಗಳನ್ನು ಪ್ರತಿಪಾದನೆ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಬಗ್ಗೆ

ಇದು ಜಾತಿಗಣತಿಯೋ, ದ್ವೇಷಗಣತಿಯೋ: ಹೆಚ್‌ಡಿಕೆ ಪ್ರಶ್ನೆ

ಜಾತಿಗಣತಿ ವರದಿಯದ್ದು ಎನ್ನಲಾದ ಅಂಕಿ ಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದು ಜಾತಿಗಣತಿಯೋ.. ದ್ವೇಷಗಣತಿಯೋ..? ಎಂದು ಪ್ರಶ್ನೆ ಮಾಡಿದ್ದಾರೆ. ಹಿಂದೆ ಜಾತಿ ಗಣತಿ ವರದಿಯನ್ನು ವಿರೋಧಿಸಿದ್ದ ಡಿಸಿಎಂ ಡಿಕೆಶಿ ಈಗ ಯೂಟರ್ನ್ ಹೊಡೆದಿರುವ ಬಗ್ಗೆ

ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ: ಸಿಎಂ ವಿರುದ್ಧ ಆರ್‌. ಅಶೋಕ್‌ ಟೀಕೆ

ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲಾ ಜಾತಿ ಜನಗಣತಿ ವರದಿ ಎಂಬ ಮಂಕು ಬೂದಿ ಎರಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡೋ ಕುತಂತ್ರ ಈಗ ಗುಟ್ಟಾಗಿ ಏನು ಉಳಿದಿಲ್ಲ ಎಂದು

ಜಾತಿಗಣತಿ ಜನತೆಗೆ ಖುಷಿಯಾದರೆ ಬಿಜೆಪಿಗೆ ಸಹಿಸಿಕೊಳ್ಳಕ್ಕೆ ಆಗುತ್ತಿಲ್ಲ: ಸಚಿವ ಬೈರತಿ ಸುರೇಶ್

ಕೋಲಾರ: ಜಾತಿಗಣತಿ ವರದಿ ಜಾರಿಗೆ ತಂದಿರುವುದು ರಾಜ್ಯದ ಜನತೆಗೆ ಖುಷಿ ಉಂಟು ಮಾಡಿದೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಮಾನ ಮರ್ಯಾದೆಯೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ನನ್ನ ಸೋಲಿಗೆ ಸಾರ್ವಕರ್ ಕಾರಣ ಅಂತ ಅಂಬೇಡ್ಕರ್ ಬರೆದಿದ್ದಾರೆ: ಸಿದ್ದರಾಮಯ್ಯ

ಬೆಂಗಳೂರು: ಚುನಾವಣೆಯಲ್ಲಿ ನನ್ನ ಸೋಲಿಗೆ ಸಾವರ್ಕರ್ ಕಾರಣ ಎಂದು ಸ್ವತಃ ಅಂಬೇಡ್ಕರ್ ಅವರೇ ಬರೆದಿದ್ದಾರೆ. ಆದರೆ ಅಂಬೇಡ್ಕರ್ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಮನುವಾದಿಗಳು ಹಸಿ ಸುಳ್ಳಿನ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು. ವಿಧಾನಸೌಧದಲ್ಲಿ ಸೋಮವಾರ ನಡೆದ ಸಂವಿಧಾನ

ಹಿಂದೂಗಳ ವಿರುದ್ಧವಾಗಿ ಬರೆಸಿದ ಜಾತಿಗಣತಿ : ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ

ಲಿಂಗಸುಗೂರು : ಸಿದ್ದರಾಮಯ್ಯನವರು ಈ ಜಾತಿಗಣತಿಯಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಹೆಚ್ಚಿಗೆ ತೋರಿಸಿ ಜಾತಿಗಣತಿ ಮಾಡಿಸಿದ್ದಾರೆ, ಜಾತಿಗಣತಿ ಅಸಮರ್ಪಕವಾಗಿ ಕೂಡಿದೆ ಇದನ್ನು ಮರುಪರಿಶೀಲನೆ ಮಾಡದೇ ಇದ್ದರೇ ಹಿಂದುಗಳು ಒಪ್ಪುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು. ಪಟ್ಟಣದಲ್ಲಿ

ಅಂಬೇಡ್ಕರ್ ಶತಮಾನ ಸಂಭ್ರಮ ನಡೆಸದಂತೆ ನಕಲಿ ಗಾಂಧಿಗಳ ಷಡ್ಯಂತ್ರ: ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ರಾಜ್ಯದಲ್ಲಿ ಅಂಬೇಡ್ಕರ್ ನಿಪ್ಪಾಣಿಗೆ ಬಂದು ಹೋದ ನೆನಪಿಗೆ ಶತಮಾನ ಸಂಭ್ರಮ ಆಚರಿಸದಂತೆ ನಕಲಿ ಗಾಂಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಭಾನುವಾರ, ಬಿಜೆಪಿ ಆಯೋಜಿಸಿದ್ದ ‘ಭೀಮ ಹೆಜ್ಜೆ ಶತಮಾನ ಸಂಭ್ರಮ’ ಒಂದು ಜಾಗೃತಿ

ಜಾತಿಗಣತಿ ವೈಜ್ಞಾನಿಕವಾಗಿಲ್ಲ, ಪಾರದರ್ಶಕತೆ ಇಲ್ಲವೆಂದ ಸಚಿವ ಸೋಮಣ್ಣ

ಜಾತಿ ಜನಗಣತಿ ವರದಿ ವರದಿ ಜಾರಿಯಾದ್ರೆ ರಾಜ್ಯದಲ್ಲಿ ಕೋಮುದಳ್ಳುರಿಗೆ ಕಾರಣವಾಗಬಹುದು. ಜಾತಿ ಜನ ಗಣತಿ ವರದಿ ಕಾಗಕ್ಕ ಗೂಬಕ್ಕ ಕತೆ ಥರ ಇದೆ. ಜಾತಿ ಜನಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿ ಸಬೇಕು. ಇನ್ನೂ ಮೂರು ವರ್ಷ ಸಮಯ ಇದೆ, ಮತ್ತೊಂದು

ಅಂಬೇಡ್ಕರ್ ಸೋಲಿಗೆ ತಂತ್ರಗಾರಿಕೆ ಹೆಣೆದಿದ್ದು ಕಾಂಗ್ರೆಸ್ ಎಂದ ಆರ್‌. ಅಶೋಕ್‌

ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿರುದ್ಧ ಅಭ್ಯರ್ಥಿ ಹಾಕಿದ್ದು ಕಾಂಗ್ರೆಸ್ ಪಕ್ಷ. ಅಂಬೇಡ್ಕರ್ ಅವರ ಸೋಲಿಗೆ ಎಲ್ಲ ಬಗೆಯ ತಂತ್ರಗಾರಿಕೆಯನ್ನು ಹೆಣೆದಿದ್ದು ಕಾಂಗ್ರೆಸ್ ಪಕ್ಷ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನ ಸೋಲಿಸಲು ನಾರಾಯಣ ಸದೋಬಾ ಕರ್ಜೋಲ್ಕರ್ ಗೆ ಸಂಪನ್ಮೂಲ ಒದಗಿಸಿದ್ದು ಕೂಡ ಕಾಂಗ್ರೆಸ್ ಪಕ್ಷ.