Menu

ಕಾಂಗ್ರೆಸ್ ಸರ್ಕಾರದಿಂದ ವಿಪಕ್ಷ ಶಾಸಕರನ್ನು ಹತ್ತಿಕ್ಕುವ ಪ್ರಯತ್ನ: ಆರ್‌ ಅಶೋಕ್‌ ಕಿಡಿ

ರೌಡಿ ಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಅವನ ತಾಯಿ ವಿಜಯಲಕ್ಷ್ಮೀ ಅವರು “ನಾನು ಬೈರತಿ ಬಸವರಾಜ್ ವಿರುದ್ಧ ದೂರು ಕೊಟ್ಟಿಲ್ಲ, ಪೊಲೀಸರೇ ಹೆಸರು ಹಾಕಿಕೊಂಡಿದ್ದಾರೆ” ಎಂದು ಹೇಳಿರುವುದು ಕಾಂಗ್ರೆಸ್ ಸರ್ಕಾರ ಈ ಪ್ರಕರಣದಲ್ಲಿ ಯಾವ ಕೀಳು ಮಟ್ಟಕ್ಕೆ ಇಳಿದು ರಾಜಕೀಯ ದ್ವೇಷ ಸಾಧಿಸುತ್ತಿದೆ ಎನ್ನುವುದನ್ನ ಸಾಬೀತು ಪಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿ ಕಾರಿದ್ದಾರೆ. ಮಾತೆತ್ತಿದರೆ ಸಿಬಿಐ, ಐಟಿ, ಇಡಿ ಮೂಲಕ ಕೇಂದ್ರ ಸರ್ಕಾರ ವಿಪಕ್ಷಗಳನ್ನು

ಮುಖ್ಯಮಂತ್ರಿಯಿಂದ ಅವಮಾನ‌: ಎಎಸ್ಪಿ ನಾರಾಯಣ ಬರಮನಿಗೆ ಡಿಸಿಪಿಯಾಗಿ ಬಡ್ತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿ ಹೊಡೆಯಲು ಯತ್ನಿಸಿದ್ದರಿಂದ ಅವಮಾನಕ್ಕೊಳಗಾದ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಅವರನ್ನು ನಗರದ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಆಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ

ಅನುವಾದ ಲೋಪಕ್ಕೆ ಸಿಎಂ ಸಿದ್ದರಾಮಯ್ಯರ ಕ್ಷಮೆ ಯಾಚಿಸಿದ ಮೆಟಾ

‘ಮೆಟಾ’ದ ಸಾಮಾಜಿಕ ವೇದಿಕೆಗಳಲ್ಲಿ ಕನ್ನಡ ಸ್ವಯಂ ಅನುವಾದದ ವೇಳೆ ಲೋಪವಾಗಿ ನೈಜ ಅರ್ಥವೇ ಕಳೆದುಹೋಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಫೇಸ್‌ಬುಕ್‌ ಮಾತೃ ಸಂಸ್ಥೆ ಮೆಟಾ ಕ್ಷಮೆ ಯಾಚಿಸಿದೆ. ಅನುವಾದದಲ್ಲಿ ದೋಷ ಕಂಡುಬರಲು ಕಾರಣವಾಗಿದ್ದ ಅಂಶಗಳನ್ನು ನಾವು ಸರಿಪಡಿಸಿದ್ದೇವೆ.

ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಮಾದರಿಯನ್ನು ಇಡೀ ದೇಶ ಅನುಸರಣೆ: ಡಿಕೆ ಶಿವಕುಮಾರ್‌

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ನಮ್ಮ ಮಾದರಿಯನ್ನು ಇಡೀ ದೇಶ ಪಾಲಿಸುತ್ತಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಬಡವರ ಬದುಕಿಗಾಗಿ ನಾವು ಗೃಹಲಕ್ಷ್ಮಿ

ಕಾರಜೋಳರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿ, ರಾಜ್ಯಾಧ್ಯಕ್ಷ ಸ್ಥಾನ ದಲಿತರಿಗೆ ನೀಡಿ : ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ವಿಜಯೇಂದ್ರ ಅವರೇ, ದಲಿತ ಮತ್ತು ಹಿಂದುಳಿದ ಜಾತಿಗಳ ಬಗ್ಗೆ ನಿಮಗೆ ಅಷ್ಟೊಂದು ಅಕ್ಕರೆ, ಕಾಳಜಿಗಳಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಒಬ್ಬ ದಲಿತ ನಾಯಕನಿಗೆ ಬಿಟ್ಟುಬಿಡಿ. ನಿಮಗೆ ಅನುಕೂಲವಾಗಲೆಂದು ಆ ಹೆಸರನ್ನು ನಾನೇ ಸೂಚಿಸುತ್ತೇನೆ. ದಲಿತ ನಾಯಕ ಗೋವಿಂದಪ್ಪ ಕಾರಜೋಳ ಅವರು

ದೇಶದಲ್ಲಿ 100 ಕೃಷಿ ಜಿಲ್ಲೆಗಳ ಅಭಿವೃದ್ಧಿ: ಕೇಂದ್ರ ಸಂಪುಟ ಅಸ್ತು

ದೇಶದಲ್ಲಿ 100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದ್ದು, ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳ ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ನೀಡಲು ‘ಪ್ರಧಾನಮಂತ್ರಿ ಧನ-ಧಾನ್ಯ ಯೋಜನೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರತಿ ರಾಜ್ಯದಿಂದ ಕನಿಷ್ಠ ಒಂದು ಜಿಲ್ಲೆ ನಿಗದಿಪಡಿಸಲಾಗಿದೆ. 11 ಸಚಿವಾಲಯಗಳ

ಎಐಸಿಸಿ ಓಬಿಸಿ ಸಭೆಯಲ್ಲಿ ಮೀಸಲಾತಿ ಮಿತಿ ಶೇ.50 ತೆಗೆದುಹಾಕುವುದು ಸೇರಿ 3 ನಿರ್ಣಯ!

ಮೀಸಲಾತಿಗೆ ಇರುವ ಶೇ. 50 ಮಿತಿಯನ್ನು ತೆಗೆದು ಹಾಕುವುದು ಸೇರಿದಂತೆ ಮೂರು ಪ್ರಮುಖ ನಿರ್ಣಯಗಳನ್ನು ಬೆಂಗಳೂರಿನಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಕೈಗೊಳ್ಳಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ಎಐಸಿಸಿ ಹಿಂದುಳಿದ ವರ್ಗಗಳ

ಮೈಸೂರಿನಲ್ಲಿ ನಡೆಯಲಿದೆ ಕಾಂಗ್ರೆಸ್‌ ಆಂತರಿಕ ಸಂಘರ್ಷದ ಶಕ್ತಿ ಪ್ರದರ್ಶನ: ಬೊಮ್ಮಾಯಿ

ಮೈಸೂರಿನಲ್ಲಿ  ಕಾಂಗ್ರೆಸ್ ನ ಅಂತರಿಕ ಸಂಘರ್ಷದ ಶಕ್ತಿಪ್ರದರ್ಶನ ಮಾಡಲು ಸಮಾವೇಶ ಮಾಡಲಾಗುತ್ತಿದೆ. ಸಮಾವೇಶ ಮಾಡುವಂಥ ಸಾಧನೆಗಳನ್ನೇನು ಕಾಂಗ್ರೆಸ್ ‌ಮಾಡಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಾಧನಾ ಸಮಾವೇಶದ ಹೆಸರಿನಲ್ಲಿ ಹಿಂದೆ ಹಾಸನದಲ್ಲಿ ಶಕ್ತಿ

ರಷ್ಯಾದೊಂದಿಗೆ ವ್ಯಾಪಾರ ಮಾಡಿದ್ರೆ ಹುಷಾರ್‌ ಎಂದ ನ್ಯಾಟೊ ಪ್ರಧಾನ ಕಾರ್ಯದರ್ಶಿ ರುಟ್ಟೆ

ರಷ್ಯಾದೊಂದಿಗೆ ವ್ಯಾಪಾರ ವ್ಯವಹಾರ ಮುಂದುವರಿಸಿದರೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತ, ಚೀನಾ, ಬ್ರೆಜಿಲ್‌ ದೇಶಗಳಿಗೆ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್‌ ರುಟ್ಟೆ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಸೆನೆಟರ್‌ಗಳ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಭಾರತ, ಚೀನಾ, ಬ್ರೆಜಿಲ್‌

ರಾಜ್ಯದಲ್ಲಿ ರಣದೀಪ್‌ ಆಡಳಿತ ಜಾರಿಯಾಗಿದ್ಯಾ: ಆರ್‌. ಅಶೋಕ್‌

ರಾಜ್ಯದಲ್ಲಿ ರಣದೀಪ್ ಆಡಳಿತ ಜಾರಿಯಾಗಿದೆಯೇ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೆಂಗಳೂರಿನಲ್ಲಿ ಶಾಸಕರು ಹಾಗೂ ಸಚಿವರ ಜತೆ ಸರಣಿ ಸಭೆಗಳನ್ನು ನಡೆಸಿರುವುದನ್ನು ಟೀಕಿಸಿ ಅಶೋಕ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ