Saturday, November 15, 2025
Menu

GST ಹೆಚ್ಚಿಸಿದ್ದು ಮೋದಿ, ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ: ಸಿದ್ದರಾಮಯ್ಯ ವ್ಯಂಗ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಡೋಂಗಿ. ಹೆಚ್ಚೆಚ್ಚು GST ವಿಧಿಸಿದ್ದೂ ಮೋದಿಯವರೇ. ಈಗ ಬೆನ್ನು ತಟ್ಟಿಕೊಳ್ತಾ ಇರೋದೂ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು. ಮಹಾರಾಜ ಕಾಲೇಜ್ ಮೈದಾನದಲ್ಲಿ ನಡೆದ ದಸರಾ ಆಹಾರ ಹಬ್ಬ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ , “ಎಂಟು ವರ್ಷಗಳಿಂದ ಹೆಚ್ಚಾಗಿ ಜಿಎಸ್‌ಟಿ ವಸೂಲಿಸಿದ ಮೋದಿ, ಈಗ ಅದನ್ನು ಹಿಂದಿರುಗಿಸಲಿದ್ದಾರೆನಾ?” ಎಂದು ಪ್ರಶ್ನಿಸಿದರು. “GST ಜಾರಿ ಮಾಡಿದ್ದೂ ಮೋದಿ. GST ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ.

ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ; ನಾಳೆ ಜಾತಿ ಗಣತಿ ಭವಿಷ್ಯ ನಿರ್ಧಾರ

ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಾದ ವಿವಾದಗಳನ್ನು ಆಲಿಸಿದ ಕರ್ನಾಟಕ ಹೈ ಕೋರ್ಟ್ ನಾಳೆ ಸೆಪ್ಟೆಂಬರ್ 23, ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಸಲು

ಜಾತಿ ಗಣತಿ: ಈ ದಾಖಲೆಗಳನ್ನು ತಪ್ಪದೇ ಸಿದ್ಧವಾಗಿಟ್ಟುಕೊಳ್ಳಿ

ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರ ವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ (ಜಾತಿ ಗಣತಿ) ಸಮೀಕ್ಷೆಯನ್ನು ರಾಜ್ಯದಲ್ಲಿ ನಡೆಸಲಿದ್ದು, ಆಯೋಗದ ಸಿಬ್ಬಂದಿಗಳು ಪ್ರತಿ ಮನೆಗೆ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸುತ್ತಾರೆ ನಂತರ ಶಿಕ್ಷಕರು ಮನೆಗಳಿಗೆ ಭೇಟಿ

ಜಾತಿಗಣತಿ ಮುಂದೂಡಲು ಆಗ್ರಹ: ಮಲ್ಲಿಕಾರ್ಜುನ ಖರ್ಗೆಗೆ ಮನವಿ ಸಲ್ಲಿಕೆ

ಇಂದಿನಿಂದ ಕರ್ನಾಟಕದಾದ್ಯಂತ ಆರಂಭವಾಗಿರುವ ಜಾತಿ ಜನಗಣತಿ (ಸಾಮಾಜಿಕ, ಆರ್ಥಿಕ, ಶೈಕ್ಷಣಿಕ) ಸಮೀಕ್ಷೆಯನ್ನು ಮುಂದೂಡುವಂತೆ ಒಕ್ಕಲಿಗ, ಲಿಂಗಾಯತ ಸಮುದಾಯಗಳು ಆಗ್ರಹಿಸಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯದ ಮುಖಂಡರು ಭೇಟಿಯಾಗಿ 15

ಬಗರಮ್ ವಾಯು ನೆಲೆಯ ಒಂದಿಂಚೂ ಕೊಡಲ್ಲ: ಟ್ರಂಪ್‌ಗೆ ಆಫ್ಘನ್‌ ಸವಾಲು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪವಿರುವ ಬಗರಮ್ ವಾಯು ನೆಲೆಯನ್ನು ಅಮೆರಿಕ ವಶಕ್ಕೆ ಮತ್ತೆ ಒಪ್ಪಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಆಗ್ರಹಿಸುತ್ತಿದ್ದು, ತಾಲಿಬಾನ್ ಅದನ್ನು ತಿರಸ್ಕರಿಸಿದೆ. ವಾಯುನೆಲೆಯನ್ನು ಅಮೆರಿಕಕ್ಕೆ ಒಪ್ಪಿಸುವುದು ಇರಲಿ, ಒಂದು ಮೀಟರ್ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಅಲ್ಲಿನ ತಾಲಿಬಾನ್ ಸರ್ಕಾರ ಸ್ಪಷ್ಟಪಡಿಸಿದೆ.

ಪಾಕ್‌ ವಾಯುಪಡೆ ದಾಳಿಗೆ 30 ಪಾಕಿಸ್ತಾನಿ ಪ್ರಜೆಗಳು ಬಲಿ

ಪಾಕಿಸ್ತಾನ ವಾಯುಪಡೆಯು ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕಣಿವೆಯಲ್ಲಿರುವ ಮಾಟ್ರೆ ದಾರಾ ಗ್ರಾಮದ ಮೇಲೆ ಪಾಕಿಸ್ತಾನದ ಜೆ-17 ಯುದ್ಧ ವಿಮಾನಗಳು ಎಂಟು

ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ: ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ ಸಿದ್ದರಾಮಯ್ಯ 

ಗೋಡಾ ಹೈ-ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಎಸೆದರು. ಮೈಸೂರಿನಲ್ಲಿ  ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ

ಜಾತಿಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ: ಡಿಕೆ ಶಿವಕುಮಾರ್

“ರಾಜ್ಯ ಸರಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮೇಲೆ ಯಾರಿಗೂ ಸಂಶಯ ಬೇಡ. ಇದು ಕೇವಲ ಜಾತಿಗಳ ಗಣತಿಯಲ್ಲ, ಸಾಮಾಜಿಕ ನ್ಯಾಯ ಒದಗಿಸುವ ಸಮೀಕ್ಷೆ. ಜನರಿಗೆ ನೆರವಾಗುವ ಸಮೀಕ್ಷೆ. ಇದರ ಬಗ್ಗೆ ಎಲ್ಲಾ ಸಮುದಾಯದವರು ಎಚ್ಚೆತ್ತುಕೊಂಡು, ಇದರ ಉಪಯೋಗ ಪಡೆಯಬೇಕು” ಎಂದು

ಜಾತಿ ಗಣತಿ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ: ಆರ್‌ ಅಶೋಕ

ಜಾತಿ ಗಣತಿ ಸಮೀಕ್ಷೆಯ ಹಿಂದೆ ಕ್ರೈಸ್ತ ಮಿಷನರಿಗಳ ಕೈವಾಡವಿದೆ. ಸರ್ಕಾರ ಸಮೀಕ್ಷೆ ಹೆಸರಲ್ಲಿ ಹಿಂದೂ ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಜೆಂಡಾದಲ್ಲೇ ಹಿಂದೂ ವಿರೋಧಿ ನೀತಿಯಿದೆ. ಹೊಸದಾಗಿ 52 ಜಾತಿಗಳನ್ನು ಸೇರಿಸಿ ಗೊಂದಲ ಮಾಡಿದ್ದರು. ಎಲ್ಲದರ ಮುಂದೆ ಕ್ರಿಶ್ಚಿಯನ್ ಹೆಸರು

ಎಚ್-1ಬಿ ವೀಸಾ ಶುಲ್ಕ ಹೆಚ್ಚಳ: ಟ್ರಂಪ್‌ ಸ್ಪಷ್ಟನೆ

ಅಮೆರಿಕದಲ್ಲಿ ಕೆಲಸ ಮಾಡಲು ಎಚ್-1ಬಿ ವೀಸಾ ಪಡೆಯುವವರಿಗೆ ಶುಲ್ಕ ಹೆಚ್ಚಳದ ಬಗ್ಗೆ ಡೊನಾಲ್ಡ್ ಟ್ರಂಪ್ ಆಡಳಿತವು ಸ್ಪಷ್ಟನೆಗಳನ್ನು ನೀಡಿದೆ. ಈ ಸ್ಪಷ್ಟನೆಗಳಿಂದ ಭಾರತೀಯರು ಸೇರಿದಂತೆ ನಾನಾ ದೇಶಗಳ ಉದ್ಯೋಗಿಗಳ ಆತಂಕ ಕಡಿಮೆಯಾಗಿದೆ. ಶುಲ್ಕ ಹೆಚ್ಚಳವು ಹೊಸ ಅರ್ಜಿಗಳಿಗೆ ಮಾತ್ರ ಅನ್ವಯಿಸಲಿದೆ. ಎಚ್-1ಬಿ