Saturday, February 22, 2025
Menu

ಮಹಾರಾಷ್ಟ್ರದಲ್ಲಿ  9.7 ಕೋಟಿ ಜನ ಮತ ಚಲಾಯಿಸಲು ಹೇಗೆ ಸಾಧ್ಯ: ರಾಹುಲ್‌ ಗಾಂಧಿ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ನಾವು ಚುನಾವಣಾ ಆಯೋಗದ ವಿರುದ್ಧ ಯಾವುದೇ ಆರೋಪಗಳನ್ನು ಮಾಡುತ್ತಿಲ್ಲ. ನಮಗೆ ಅಂತಿಮ ಮತದಾರರ ಪಟ್ಟಿ ಮಾತ್ರ ಬೇಕು. ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ,ಮಹಾರಾಷ್ಟ್ರದ  9.54 ಕೋಟಿ ವಯಸ್ಕ ಜನಸಂಖ್ಯೆ ಇರುವಾಗ 9.7 ಕೋಟಿ ಜನರು ಹೇಗೆ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

2029 ರ ವಿಧಾನಸಭಾ ಚುನಾವಣೆ ಮತ್ತು 2024 ರ ಲೋಕಸಭಾ ಚುನಾವಣೆಯ ನಡುವೆ 32 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ.  2024 ರ ಲೋಕಸಭಾ ಚುನಾವಣೆ ಮತ್ತು ಅದೇ ವರ್ಷದ ವಿಧಾನಸಭಾ ಚುನಾವಣೆಯ ನಡುವೆ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಇದು ಕೇವಲ ಐದು ತಿಂಗಳಲ್ಲಿ ನಡೆದಿದೆ. ನಾನು ಸಂಸತ್ತಿನಲ್ಲಿ ಈ ಬಗ್ಗೆ ಮಾತನಾಡಿದ್ದೇನೆ, ಆದರೆ ಚುನಾವಣಾ ಆಯೋಗ ಇನ್ನೂ ಪ್ರತಿಕ್ರಿಯಿಸಿಲ್ಲ ಎಂದು ಹೇಳಿದ್ದಾರೆ.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವಿನ ಐದು ತಿಂಗಳಲ್ಲಿ ಮಹಾರಾಷ್ಟ್ರದ ಮತದಾರರ ಪಟ್ಟಿಗೆ 70 ಲಕ್ಷ ಮತದಾರರನ್ನು ಸೇರಿಸಲಾಗಿದೆ ಎಂಬುದಾಗಿತ್ತು. ಶಿರಡಿಯ ಒಂದು ಕಟ್ಟಡದ ವಿಳಾಸದಿಂದ 7000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ನವೆಂಬರ್ 29 ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಆರು ದಿನಗಳ ನಂತರ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.
ನಿಯೋಗ ಆಯೋಗವನ್ನು ಭೇಟಿಯಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮತದಾರರಲ್ಲಿ  12% ಹೆಚ್ಚಳವನ್ನು ಪ್ರಸ್ತಾಪಿಸಿತ್ತು.

ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸಲ್ಲಿಸಿದ ಮನವಿಯಲ್ಲಿ ಮತದಾರರ ಪಟ್ಟಿಗೆ ಸೇರಿಸಲಾದ 39 ಲಕ್ಷ ಮತದಾರರ ಅಸಲಿ ಡೇಟಾವನ್ನು ಕೋರಿದೆ.

ಆಯೋಗದ ಸ್ಪಷ್ಟನೆ: ಚುನಾವಣಾ ಆಯೋಗವು ರಾಜಕೀಯ ಪಕ್ಷಗಳನ್ನು ಆದ್ಯತೆಯ ಪಾಲುದಾರರು ಎಂದು ಪರಿಗಣಿಸುತ್ತದೆ. ದೇಶಾದ್ಯಂತ ಏಕರೂಪವಾಗಿ ಅಳವಡಿಸಿಕೊಳ್ಳಲಾದ ವಾಸ್ತವಿಕ ಮತ್ತು ಯೋಜಿತ ಕಾರ್ಯವಿಧಾನ ದೊಂದಿಗೆ ಆಯೋಗವು ಇದಕ್ಕೆ ಲಿಖಿತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *