ತನಗಿಂತ ಸುಂದರವಾಗಿ ಕಾಣುತ್ತಿರುವ ಕಾರಣಕ್ಕೆ ಆರು ವರ್ಷದ ಮುದ್ದು ಸೊಸೆಯನ್ನು ಮಹಿಳೆಯೊಬ್ಬಳು ನೀರಿನ ಟಬ್‌ನಲ್ಲಿ ಮುಳುಗಿಸಿ ಸಾಯಿಸಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಈ ಪ್ರಕರಣ ವಿಚಾರಣೆ ನಡೆಸಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಮಾಹಿತಿ ಲಭಿಸಿದೆ.
ಆರೋಪಿ ಪೂನಂ ಈ ಮೊದಲು ತನ್ನ ಮಗ ಸೇರಿ ಇದೇ ಕಾರಣಕ್ಕೆ ಮೂರು ಮಕ್ಕಳನ್ನು ಕೊಲೆ ಮಾಡಿದ್ದಳು ಎಂದಬುದನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಆ ಮೂರೂ ಮಕ್ಕಳ ಸಾವು ಆಕಸ್ಮಿಕ ಎಂದೇ ಈವರೆಗೆ ತಿಳಿಯಲಾಗಿತ್ತು.
ಹರಿಯಾಣದ ಪಾಣಿಪತ್‌ನ ಮದುವೆ ಸಮಾರಂಭವೊಂದರಲ್ಲಿ ಇದ್ದಕ್ಕಿಂದ್ದಂತೆ ಆರು ವರ್ಷದ ಹೆಣ್ಣು ಮಗು ಕಾಣೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಬಳಿಕ ಮಗು ಹೆಣವಾಗಿ ಸಿಕ್ಕಿದೆ.ಮನೆಯ ಮೊದಲ ಮಹಡಿಯಲ್ಲಿರುವ ಸ್ಟೋರ್‌ರೂಮ್‌ನೊಳಗೆ ವಾಟರ್‌ಟಬ್‌ನಲ್ಲಿ ವಿಧಿ ಬಿದ್ದಿರುವುದು ಪತ್ತೆಯಾಗಿತ್ತು, ಆದರೆ ಆಕೆಯ ಕಾಲುಗಳು ಮಾತ್ರ ನೆಲಕ್ಕೆ ತಾಕಿದ್ದವು. ತಕ್ಷಣವೇ ವೈದ್ಯಕೀಯ ಕಾಲೇಜಿಗೆ ದಾಖಲಿಸಿದರೂ ವೈದ್ಯರು ಮಗು ಮೃತಪಟ್ಟಿರುವುದಾಗಿ ತಿಳಿಸಿದ್ದರು. ವಿಧಿಯ ತಂದೆ ಎಫ್‌ಐಆರ್ ದಾಖಲಿಸಿ ಇದು ಕೊಲೆ ಎಂದು ಆರೋಪ ಮಾಡಿದ ಬಳಿಕ ನಡೆದ ಪೊಲೀಸ್ ತನಿಖೆಯಲ್ಲಿ ಆರೋಪಿ ಪೂನಂಕೊಲೆ ಮಾಡಿರುವುದು ತಿಳಿದು ಬಂದಿದೆ.
ಸೋನಿಪತ್‌ಆರು ವರ್ಷದ ವಿಧಿ ವಿಧಿ ಕುಟುಂಬದೊಂದಿಗೆ ಪಾಣಿಪತ್‌ನ ಇಸ್ರಾನಾ ಗ್ರಾಮ ನೌಲತಾ ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಯ ಮದುವೆಗೆ ಬಂದಿದ್ದಳು. ಆಕೆಯ ಅಜ್ಜ ಪಾಲ್ ಸಿಂಗ್, ಅಜ್ಜಿ ಓಮ್‌ವತಿ, ತಂದೆ ಸಂದೀಪ್, ತಾಯಿ ಹಾಗೂ 10 ತಿಂಗಳ ಕಿರಿಯ ಸಹೋದರ ಕೂಡ ಜತೆಗಿದ್ದ.
ಪೂನಂ ತನಗಿಂತ ಸುಂದರವಾಗಿ ಯಾರೂ ಕಾಣಬಾರದು ಎಂದು ಬಯಸಿದ್ದರಿಂದ ನೀರಿನಲ್ಲಿ ಮುಳುಗಿಸಿ ಸಾಯಿಸುವ ವಿಷಕಾರಿ ಮನಸ್ಥಿತಿ ಹೊಂದಿದ್ದಳು. ತನ್ನ ಸ್ವಂತ ಮಗ ಸಸೇರಿ ಈ ಹಿಂದೆ ಒಟ್ಟು ಮೂವರು ಮಕ್ಕಳನ್ನು ಕೊಲೆ ಮಾಡಿದ್ದಳು ಎಂಬುದು ತನಿಖೆಯಲ್ಲಿ ಬಯಲಾಗಿದೆ.
2023 ರಲ್ಲಿ ಪೂನಂ ಅತ್ತಿಗೆಯ ಮಗಳನ್ನು ಕೊಂದಿದ್ದಳು. ಅದೇ ವರ್ಷ ಅನುಮಾನ ಬರದಂತೆ ತನ್ನ ಮಗನನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು. ಆಗಸ್ಟ್‌ನಲ್ಲಿ ಸಿವಾ ಗ್ರಾಮದಲ್ಲಿ ಮತ್ತೊಬ್ಬ ಹುಡುಗಿಯನ್ನು ಕೊಲೆ ಮಾಡಿದ್ದಳು. ಆರೋಪಿ ಪೊಲೀಸ್ ವಿಚಾರಣೆಯಲ್ಲಿ ಈ ಸತ್ಯವನ್ನು ಒಪ್ಪಿಕೊಳ್ಳುವವರೆಗೂ ಈ ಮಕ್ಕಳ ಸಾವು ಆಕಸ್ಮಿಕವೆಂದು ಭಾವಿಸಲಾಗಿತ್ತು.


