Menu

ಬಳ್ಳಾರಿಯಲ್ಲಿ ಪಿಎಸ್‌ಐ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬಳ್ಳಾರಿಯ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೈತ್ರಾ. ತಮ್ಮ ಪತಿ ಕಾಳಿಂಗ ಹಾಗೂ ಮಕ್ಕಳನ್ನು ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ ಮನೆಯಲ್ಲಿ ನೇಣುಬಿಗಿದುಕೊಂಡಿದ್ದಾರೆ.

ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ, ಆದರೆ ಚೈತ್ರಾ ಇತ್ತೀಚಿಗೆ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ತವರು ಮನೆಗೆ ಹೋಗಿದ್ದ ಚೈತ್ರಾ ಎರಡು ದಿನಗಳ ಹಿಂದೆಯಷ್ಟೇ ಮರಳಿದ್ದರುಎಂದು ತಿಳಿದು ಬಂದಿದೆ.

Related Posts

Leave a Reply

Your email address will not be published. Required fields are marked *