Menu

ಅಂಗನವಾಡಿಗಳಿಗೆ ಜನತಾ ಬಜಾರ್ ಮೂಲಕ ಗುಣಮಟ್ಟದ ಆಹಾರ ಪದಾರ್ಥ ಪೂರೈಸಿ: ಸಿಎಂಗೆ ಆರ್‌.ಅಶೋಕ ಆಗ್ರಹ

ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸ್ಸಿನ ಅನ್ವಯ ರಾಜ್ಯದಲ್ಲಿ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಕಳಪೆ ಆಹಾರವನ್ನು ಕೂಡಲೇ ನಿಲ್ಲಿಸಿ, ಮೊದಲಿನಂತೆ ಸರ್ಕಾರಿ ಸ್ವಾಮ್ಯದ ಸಹಹಾರಿ ಸಂಸ್ಥೆಯಾದ ಜನತಾ ಬಜಾರ್ ಮೂಲಕ ಗುಣಮಟ್ಟದ ಆಹಾರ ಪದಾರ್ಥಗಳನ್ನು ಪೂರೈಸಬೇಕು ಎಂದು ಆಗ್ರಹಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದಾಗಿ ಪ್ರತಿಪಕ್ಷ ನಾಯಕ ಆರ್‌. ಅಶೋಕ ಹೇಳಿದ್ದಾರೆ. 

ಈ ವಿಚಾರವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅವರು ಪೋಸ್ಟ್‌ ಮಾಡಿದ್ದು, ಜೊತೆಗೆ ಅವರು ಸಿಎಂಗೆ ಬರೆದಿರುವ ಪತ್ರದ ಪ್ರತಿಯನ್ನೂ ಕೂಡ ಅಟ್ಯಾಚ್‌ ಮಾಡಿದ್ದಾರೆ.

 

ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೆಸರಿನಲ್ಲಿ ಮತ್ತೊಮ್ಮೆ ಹಗಲು ದರೋಡೆ

ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ಜೇಬಿಗೆ ಕತ್ತರಿ ಹಾಕಿ ಲೂಟಿ ಹೊಡೆಯಲು ಒಂದಲ್ಲ ಒಂದು ಅಡ್ಡದಾರಿ ಹುಡುಕುತ್ತಲೇ ಬಂದಿರುವ ರಾಜ್ಯ @INCKarnataka ಸರ್ಕಾರ ಈಗ ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಹೆಸರಿನಲ್ಲಿ ಮತ್ತೊಮ್ಮೆ ಹಗಲು ದರೋಡೆ ಮಾಡಲು ಹೊರಟಿದೆ ಎಂದು ಅಶೋಕ ಅವರು ಮತ್ತೊಂದು ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ. .

ಅಧಿಕಾರಕ್ಕೆ ಬಂದ ಕೇವಲ 4 ತಿಂಗಳಲ್ಲಿ, ಅಂದರೆ, 2023 ಅಕ್ಟೋಬರ್ ನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ (ಗೈಡೆನ್ಸ್ ವ್ಯಾಲ್ಯೂ) ಶೇಕಡಾ 30ರಷ್ಟು ಹೆಚ್ಚಳ ಮಾಡಿದ್ದಾಯ್ತು.  ನಂತರ ಇ-ಖಾತೆ ಹೆಸರಿನಲ್ಲಿ ಜನರಿಂದ ವಸೂಲಿ ಮಾಡಿದ್ದಾಯ್ತು. ಈಗ ಬಿ ಖಾತಾ ಪರಿವರ್ತನೆಗೆ ನಿವೇಶನದ ಮಾರ್ಗಸೂಚಿ ದರದ 5% ಶುಲ್ಕ ಹೇರುವ ಮೂಲಕ ಹಗಲು ದರೋಡೆಗೆ ಇಳಿದಿದೆ ಎಂದು ಹೇಳಿದ್ದಾರೆ.

ಸ್ವಾಮಿ ಡಿಸಿಎಂ @DKShivakumar ಅವರೇ, ಬಿ ಖಾತಾ ನಿವೇಶನ ಹೊಂದಿರುವ ಜನಸಾಮಾನ್ಯರು ಈಗಾಗಲೇ ಪ್ರತಿ ವರ್ಷ ಆಸ್ತಿ ತೆರಿಗೆ, ನೀರು, ತ್ಯಾಜ್ಯ ಸೇರಿದಂತೆ ಎಲ್ಲ ತೆರಿಗೆಗಳನ್ನೂ ಕಟ್ಟುತ್ತಿದ್ದಾರೆ. ಈಗ ಎ ಖಾತಾ ಪರಿವರ್ತನೆಗೆ ಮಾರ್ಗಸೂಚಿ ದರದ ಆಧಾರದ ಮೇಲೆ ಮತ್ತೊಮ್ಮೆ 2 ಲಕ್ಷದಿಂದ 8 ಲಕ್ಷ ರೂಪಾಯಿವರೆಗೆ ಶುಲ್ಕ ಕಟ್ಟಬೇಕು ಅಂದರೆ ಪಾಪ ಅವರು ಎಲ್ಲಿಂದ ತರಬೇಕು? ನಿಮ್ಮ ದುಡ್ಡಿನ ದಾಹಕ್ಕೆ ಕನ್ನಡಿಗರ ರಕ್ತ ಇನ್ನೆಷ್ಟು ಹೀರುತ್ತೀರಿ ಎಂದು  ಪ್ರಶ್ನಿಸಿದ್ದಾರೆ.

ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯ ಅಂಚಿಗೆ ತಳ್ಳಿ, ಎಲ್ಲ ರಂಗಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ ತನ್ನ ಆಂತರಿಕ ಕಚ್ಚಾಟ, ವೈಫಲ್ಯ, ಹಾಗು ಭ್ರಷ್ಟಾಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಆರ್ ಎಸ್ಎಸ್ ಬಗ್ಗೆ ಇಲ್ಲಸಲ್ಲದ ಆರೋಪ, ನಿಂದನೆ ಮಾಡುತ್ತಿದೆ. ಕಾಂಗ್ರೆಸ್ ನಾಯಕಕರು ಎಷ್ಟೇ ತಿಪ್ಪರಲಾಗ ಹಾಕಿದರೂ ಆರ್ ಎಸ್ಎಸ್ ಸಂಘಟನೆಯನ್ನು ಏನೂ ಮಾಡಲು ಸಾಧ್ಯವಿಲ್ಲ. ಸಂಘ ವಜ್ರವಿದ್ದಂತೆ. ಅದಕ್ಕೆ ಪೆಟ್ಟು ಕೊಟ್ಟಷ್ಟು ಹೊಳಪು ಹೆಚ್ಚಾಗುತ್ತದೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *