Menu

ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ 50 ರಾಜ್ಯಗಳಲ್ಲಿ ಪ್ರತಿಭಟನೆ

donald trump

ವಾಷಿಂಗ್ಟನ್: ವಲಸೆ ನೀತಿ, ಸರ್ಕಾರಿ ನೌಕರರ ವಜಾ ಮತ್ತು ಉಕ್ರೇನ್-ಗಾಜಾ ಯುದ್ಧದ ಕುರಿತ ನೀತಿಯ ವಿರುದ್ಧ ಅಮೆರಿದಕಲ್ಲಿ ಸಾರ್ವಜನಿಕರು ರಸ್ತೆಗೆ ಇಳಿದು ತಮ್ಮ ಆಕ್ರೋಶವನ್ನು ಹೊರಹಾಕಿದರು.

’50 ರಾಜ್ಯಗಳಲ್ಲಿ 50 ಪ್ರತಿಭಟನೆಗಳು ? ಒಂದೇ ಚಳವಳಿ’ ಎಂಬ ಧ್ಯೇಯವಾಕ್ಯದೊಂದಿಗೆ ’50501’ ಎಂಬ ಸಕ್ರಿಯ ಕಾರ್ಯಕರ್ತರ ಸಮೂಹ ಈ ಚಳವಳಿಗೆ ಚಾಲನೆ ನೀಡಿದೆ.

ದೇಶದಾದ್ಯಂತ ಸುಮಾರು ೪೦೦ ಪ್ರತಿಭಟನೆಗಳು ನಡೆಯುತ್ತಿದ್ದು ಜನವರಿಯಲ್ಲಿ ಟ್ರಂಪ್ ಮತ್ತೆ ಅಧಿಕಾರಕ್ಕೆ ಬಂದ ನಂತರ ಇದು ನಾಲ್ಕನೇ ಬೃಹತ್ ವಿರೋಧ ಚಟುವಟಿಕೆ ಎನ್ನಬಹುದು. ’ರಾಜತಂತ್ರ ಬೇಡ’, ’ದ್ವೇಷದಿಂದ ರಾಷ್ಟ್ರ ದೊಡ್ಡದಾಗುವುದಿಲ್ಲ’ ಎಂಬ ಘೋಷಣೆಗಳು ರಸ್ತೆಗಳಲ್ಲಿ ಮೊಳಗುತ್ತಿವೆ.

ವೈಟ್ ಹೌಸ್ ಹೊರಗಡೆ “ಕಾರ್ಮಿಕರಿಗೆ ಅಧಿಕಾರ ಬೇಕು”, “ರಾಜತಂತ್ರ ಬೇಡ”, “ಇಸ್ರೇಲಿಗೆ ಶಸ್ತ್ರಾಸ್ತ್ರ ನಿಲ್ಲಿಸಿ” ಎಂಬ ಪೋಸ್ಟರ್‌ಗಳನ್ನು ಹಿಡಿದಿದ್ದ ಪ್ರತಿಭಟಕರು, ಟ್ರಂಪ್ ಆಡಳಿತದ ವಿರುದ್ಧ ಕಿಡಿಕಾರಿದರು.

ಮಾನಹ್ಯಾಟನ್‌ನಿಂದ ಆರಂಭವಾಗಿ ಸಾನ್ ಫ್ರಾನ್ಸಿಸ್ಕೋವರೆಗೆ ಹಬ್ಬಿದ ಈ ಪ್ರತಿಭಟನೆಗಳಲ್ಲಿ ಟ್ರಂಪ್ ನೇತೃತ್ವದ ಅಮೆರಿಕದ ಮೇಲೆ ತೀವ್ರ ಅಸಮಾಧಾನ ವ್ಯಕ್ತವಾಯಿತು.  ಸಾನ್ ಫ್ರಾನ್ಸಿಸ್ಕೋನಲ್ಲಿ ಪೆಸಿಫಿಕ್ ಮಹಾಸಾಗರದ ದಡದ ಬಳಿ ವಾಗ್ದಂಡನೆ ಮತ್ತು ವಜಾ ಎಂಬ ಮಾನವ ಬ್ಯಾನರ್ ಒಂದು ವಿಶೇಷ ಗಮನ ಸೆಳೆಯಿತು.

ವಲಸಿಗರ ಗಡಿಪಾರು ಕಾರ್ಯಾಚರಣೆಯ ವಿರುದ್ಧ ಘೋಷಣೆಗಳನ್ನು ಕೂಗಿ, ಅವರನ್ನು ಬೆಂಬಲಿಸಿದವರ ಸಾಲುಗಳು ರಸ್ತೆಗಳನ್ನು ತುಂಬಿದ್ದವು. “ಅಮೆರಿಕದ ವಲಸೆ ಯಂತ್ರವನ್ನು ಬಳಸುತ್ತಿರುವ ಟ್ರಂಪ್ ಆಡಳಿತದ ವಿರುದ್ಧ ನಾವು ಪ್ರತಿರೋಧದ ಜಾಲವನ್ನು ಕಟ್ಟುತ್ತೇವೆ,” ಎಂದು ವೈಟ್ ಹೌಸ್ ಹತ್ತಿರದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ತಿಳಿಸಿದರು.

ಟ್ರಂಪ್ ಆಡಳಿತವು ವಲಸೆದಾರರನ್ನು ದೇಶದಿಂದ ಹೊರಹಾಕಲು, ಹಲವಾರು ಫೆಡರಲ್ ನೌಕರರನ್ನು ವಜಾಗೊಳಿಸಲು ಮತ್ತು ಇಡೀ ಸರ್ಕಾರಿ ಇಲಾಖೆಗಳನ್ನು ಬಂದ್ ಮಾಡಲು ಮುಂದಾಗಿರುವುದನ್ನು ಪ್ರತಿಭಟನಾಕಾರರು ನಾಗರಿಕ ಹಕ್ಕುಗಳ ಉಲ್ಲಂಘನೆ ಮತ್ತು ಸಂವಿಧಾನಾತ್ಮಕ ಧಿಕ್ಕಾರವೆಂದು ಟೀಕಿಸಿದರು.

ಮಾಸಚೂಸೆಟ್ಸ್‌ನ ಕಾಂಕೋರ್ಡಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಸ್ಟನ್ ನಿವಾಸಿ ಜಾರ್ಜ್ ಬ್ರಿಯಂಟ್, “ಅಮೆರಿಕದಲ್ಲಿ ಟ್ರಂಪ್ ಪೊಲೀಸ್ ರಾಷ್ಟ್ರ ನಿರ್ಮಿಸುತ್ತಿದ್ದಾರೆ ಎಂಬ ಆತಂಕವಿದೆ,” ಎಂದರು.

Related Posts

Leave a Reply

Your email address will not be published. Required fields are marked *