Menu

Yettinahole-ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ವಿರೋಧಿಸಿ ರೈತರ ಪ್ರತಿಭಟನೆ

ದೊಡ್ಡಬಳ್ಳಾಪುರದ ರೈತರು ಎತ್ತಿನಹೊಳೆ ಯೋಜನೆಯ ಭಾಗವಾಗಿ ಲಕ್ಕೇನ ಹಳ್ಳಿಯಲ್ಲಿ ಜಲಾಶಯ ನಿರ್ಮಾಣ  ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಅಣೆಕಟ್ಟೆ ನಿರ್ಮಾಣದಿಂದಾಗಿ ಕೃಷಿ ಭೂಮಿ ಮುಳುಗಡೆಯಾಗುವ ಮತ್ತು ಸ್ಥಳಾಂತರಗೊಳ್ಳುವ ಭಯದಿಂದ ಸಸರಪಾಳ್ಯ, ಶ್ರೀರಾಮನಹಳ್ಳಿ ಮತ್ತು ಇತರ ಗ್ರಾಮಗಳ ಸ್ಥಳೀಯರು ಯೋಜನೆಯನ್ನು ವಿರೋಧಿಸುತ್ತಿದ್ದಾರೆ.

ಈ ಯೋಜನೆಯಿಂದ 2673 ಎಕರೆ ಭೂಮಿ ಮುಳುಗಡೆಯಾಗಲಿದೆ. ಹೀಗಾಗಿ ಅವರು ಅಣೆಕಟ್ಟೆಯನ್ನು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ. ನಾವು ನಮ್ಮ ಜೀವ ನೀಡುತ್ತೇವೆ, ಆದರೆ ನಮ್ಮ ಭೂಮಿಯನ್ನು ನೀಡುವುದಿಲ್ಲ ಎಂಬ ಘೋಷಣೆಗಳೊಂದಿಗೆ ತಮ್ಮ ಭೂಮಿಯನ್ನು ತೆಗೆದುಕೊಳ್ಳುವ ಪ್ರಯತ್ನಗಳನ್ನು ವಿರೋಧಿಸಲು ಸಿದ್ಧರಾಗಿದ್ದಾರೆ.

ಜಲಾಶಯದಿಂದ ಮುಳಗಡೆ ಆಗಲಿರುವ ಗ್ರಾಮಗಳ ರೈತರು ಮಚ್ಚೇನಹಳ್ಳಿ ಮಾರಮ್ಮ ದೇಗುಲ ಆವರಣದಲ್ಲಿ ಸಭೆ ನಡೆಸಿ, ತಮ್ಮ ಊರು ಮತ್ತು ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ನಿರ್ಧಾರ ಕೈಗೊಂಡಿದ್ದಾರೆ. ಯೋಜನೆಗಳ ಹೆಸರಲ್ಲಿ ನಮ್ಮ ಭೂಮಿ ಕಸಿದುಕೊಂಡು ನಮ್ಮನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಹೇಳಿದ್ದಾರೆ.

ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣಗೊಂಡರೆ ೨.೪೫ ಟಿಎಂಸಿ ನೀರು ಸಂಗ್ರಹವಾಗುತ್ತದೆ. ೨೬೭೩ ಎಕರೆ ಫಲವತ್ತಾದ ಜಮೀನು ನಾಶವಾಗಿ ಹಲವು ಗ್ರಾಮಗಳು ಸಂಪೂರ್ಣ ಮುಳುಗಡೆ ಆಗುತ್ತವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದಿಂದ ಒಂದು ಗುಂಟೆ ಜಮೀನಿಗೆ ೧.೪೨ ಲಕ್ಷ ಪರಿಹಾರ ಬರಬೇಕಿದ್ದು, ರೈತರಿಗೆ ೮೩ ಸಾವಿರ ರೂ. ಮಾತ್ರ ಸಿಗುತ್ತಿದೆ. ಉಳಿದ ಹಣವನ್ನು ಮಧ್ಯವರ್ತಿಗಳು ಲಪಟಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Related Posts

Leave a Reply

Your email address will not be published. Required fields are marked *