ಮೊಹಾಲಿ: ಪ್ರಿಯಾಂಕ್ ಆರ್ಯಾ ಚೊಚ್ಚಲ ಶತಕದ ಸಹಾಯದಿಂದ ಪಂಜಾಬ್ ಕಿಂಗ್ಸ್ ಐಪಿಎಲ್ ಟಿ-20 ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 20 ರನ್ ಗಳ ರೋಚಕ ಜಯ ಸಾಧಿಸಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 219 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು
ಕಠಿಣ ಗುರಿ ಬೆಂಬತ್ತಿದ ಚೆನ್ನೈ ತಂಡಕ್ಕೆ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೆ ಮೊದಲ ವಿಕೆಟ್ ಗೆ 61 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ರಚಿನ್ ರವೀಂದ್ರ 36 ರನ್ ಗಳಿಸಿದ್ದಾಗ ಮ್ಯಾಕ್ಸ್ ವೆಲ್ ಎಸೆತದಲ್ಲಿ ಸ್ಟಂಪ್ ಔಟಾಗಿ ನಿರ್ಗಮಿಸಿದರು.
ನಂತರ ಬಂದ ನಾಯಕ ಋತುರಾಜ್ ಗಾಯಕ್ವಾಡ್ (1) ವಿಫಲರಾದರು. ಶಿವಂ ದುಬೆ ಮತ್ತು ಕಾನ್ವೆ 3ನೇ ವಿಕೆಟ್ ಗೆ 91 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ದುಬೆ 27 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 42 ರನ್ ಗಳಿಸಿ ಔಟಾದರೆ, ಕಾನ್ವೆ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 69 ರನ್ ಸಿಡಿಸಿದ್ದಾಗ ರಿಟೈರ್ಡ್ ಘೋಷಿಸಿ ಮೈದಾನ ತೊರೆದರು.
5ನೇ ಕ್ರಮಾಂಕದಲ್ಲಿ ಆಡಲು ಬಂದ ಧೋನಿ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಸಿ 27 ರನ್ ಗಳಿಸಿದರೂ ತಂಡವನ್ನು ಗೆಲ್ಲಿಸಿ ಮತ್ತೆ ಹೀರೋ ಆಗುವ ಪ್ರಯತ್ನದಲ್ಲಿ ವಿಫಲರಾದರು. ಕೊನೆಯಲ್ಲಿ ರವೀಂದ್ರ ಜಡೇಜಾ 1 ಸಿಕ್ಸರ್ ನೊಂದಿಗೆ 9 ಹೊಡೆದರೂ ಸಾಕಾಗಲಿಲ್ಲ. ಪಂಜಾಬ್ ಪರ ಲೂಕಿ ಫರ್ಗೂಸನ್ 2 ವಿಕೆಟ್ ಪಡೆದರು.
ಪಂಜಾಬ್ ಆಡಿದ 4 ಪಂದ್ಯಗಳಿಂದ 3 ಜಯ ಹಾಗೂ 1 ಸೋಲಿನೊಂದಿಗೆ 6 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೇರಿದರೆ, ಚೆನ್ನೈ ಸೂಪರ್ ಕಿಂಗ್ಸ್ 4 ಪಂದ್ಯಗಳಿಂದ 1 ಜಯ ಹಾಗೂ 3 ಸೋಲಿನೊಂದಿಗೆ 2 ಅಂಕದೊಂದಿಗೆ 9ನೇ ಸ್ಥಾನಕ್ಕೆ ಕುಸಿದಿದೆ.
ಪ್ರಿಯಾಂಕ್ ಚೊಚ್ಚಲ ಶತಕ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಪಂಜಾಬ್ ತಂಡ ಪ್ರಿಯಾಂಕ್ ಆರ್ಯಾ 39 ಎಸೆತಗಳಲ್ಲಿ ಟೂರ್ನಿಯ ಮೊದಲ ಶತಕ ಸಿಡಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು.
ಪಂಜಾಬ್ ಆರಂಭದಲ್ಲೇ ನಾಯಕ ಶ್ರೇಯಸ್ ಅಯ್ಯರ್ ಸೇರಿದಂತೆ ಪ್ರಮುಖ ಐವರು ಬ್ಯಾಟ್ಸ್ ಮನ್ ಗಳನ್ನು 83 ರನ್ ಗೆ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು.
ಪ್ರಿಯಾಂಕ್ ಆರ್ಯಾ 39 ಎಸೆತಗಳಲ್ಲಿ ಶತಕ ಪೂರೈಸಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ದಾಖಲೆ ಬರೆದರು. ಆರ್ಯಾ 42 ಎಸೆತಗಳಲ್ಲಿ 7 ಬೌಂಡರಿ ಮತ್ತು 9 ಸಿಕ್ಸರ್ ನೊಂದಿಗೆ 103 ರನ್ ಬಾರಿಸಿ ಔಟಾದರು.
ಕೊನೆಯಲ್ಲಿ ಶಶಾಂಕ್ ಮತ್ತು ಮಾರ್ಕೊ ಜಾನ್ಸನ್ 65 ರನ್ ಜೊತೆಯಾಟದಿಂದ ತಂಡ ಮೊತ್ತವನ್ನು 200ರ ಗಡಿ ದಾಟಿಸಿದರು. ಶಶಾಂಕ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 52 ರನ್ ಬಾರಿಸಿ ಔಟಾಗದೇ ಉಳಿದರೆ, ಜಾನ್ಸನ್ 19 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 34 ರನ್ ಬಾರಿಸಿದರು.