19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 49 ರೂ. ಹೆಚ್ಚಿಸಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. 14.2 ಕೆಜಿ ದೇಶೀಯ ಎಲ್ಪಿಜಿ ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಕೇಂದ್ರ ಬಜೆಟ್ ಮಂಡನೆಗೂ ಮೊದಲೇ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ಗಳ ಬೆಲೆ ಹೆಚ್ಚಳವು ಬಳಕೆದಾರರಲ್ಲಿ ಮತ್ತು ಗ್ರಾಹಕರಲ್ಲಿ ಅಸಮಾಧಾನ ಹುಟ್ಟು ಹಾಕಿದೆ. ಈ ಬೆಲೆ ಏರಿಕೆಯ ಪರಿಣಾಮವನ್ನು ಬಳಕೆದಾರರು ಮತ್ತು ಗ್ರಾಹಕರು ಅನುಭವಿಸಬೇಕಾಗುತ್ತದೆ.
ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆ ಹೋಟೆಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ವೆಚ್ಚ ಹೆಚ್ಚಿಸಿದೆ. ಕಳೆದ ತಿಂಗಳು, ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು 111 ರೂ. ಹೆಚ್ಚಿಸಲಾಗಿತ್ತು.
ವಾಣಿಜ್ಯ ಎಲ್ಪಿಜಿ ದರಗಳ ಹೆಚ್ಚಳದ ಜೊತೆಗೆ, 5 ಕೆಜಿ ಫ್ರೀ ಟ್ರೇಡ್ ಎಲ್ಪಿಜಿ (ಎಫ್ಟಿಎಲ್) ಸಿಲಿಂಡರ್ಗಳ ಬೆಲೆಯನ್ನು ಜ.1 ರಿಂದ ಜಾರಿಗೆ ಬರುವಂತೆ 27 ರೂ. ಹೆಚ್ಚಿಸಲಾಗಿದೆ. ಬಜೆಟ್ ಮಂಡನೆಗೂ ಮೊದಲೇ ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ ವು ಈ ಸಂಬಂಧ ಬಜೆಟ್ನಲ್ಲಿ ಯಾವುದೇ ಕಡಿತ, ರಿಯಾಯಿತಿ ಘೋಷಣೆ ಇಲ್ಲ ಎಂಬುದನ್ನು ಸೂಚಿಸುತ್ತಿದೆ.


