ರೈತರಿಗೆ ವಂಚಿಸಿದ ಆರೋಪಿಗಳನ್ನು ರಕ್ಷಿಸುವಂತೆ ಮುಖ್ಯಮಂತ್ರಿಗಳ ಆಪ್ತ, ಸಚಿವ ZameerAhmed ಅವರು ಪೊಲೀಸರ ಮೇಲೆ ಒತ್ತಡ ಹಾಕಿರುವುದು ಖಂಡನೀಯ. ಸಚಿವ ಸಂಪುಟ ಸದಸ್ಯರೇ ಹೀಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳುವುದಾದರೆ ರಾಜ್ಯದಲ್ಲಿ ಸಂವಿಧಾನ, ಕಾನೂನು ನಿಯಮಗಳು ಇದ್ದು ಪ್ರಯೋಜನವೇನು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿ ಕಾರಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಮಾನ್ಯ @siddaramaiah ನವರೇ, ಜಮೀರ್ ಅವರನ್ನು ಸಂಪುಟದಲ್ಲಿ ಇರಿಸಿಕೊಂಡು ಯಾವ ಸಂದೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಪೋಸ್ಟ್ ಮಾಡಿರುವ ಅವರು,ಅತಿವೃಷ್ಟಿಯಿಂದ ನಲುಗಿ ಹೋಗಿರುವ ರೈತರು ಅಷ್ಟೋ ಇಷ್ಟೋ ಕೈಹಿಡಿದಿರುವ ಫಸಲನ್ನಾದರೂ ಒಳ್ಳೆ ಬೆಲೆಗೆ ಮಾರಿ ನಿಟ್ಟುಸಿರು ಬಿಡೋಣ ಅಂದ್ರೆ ಫ್ರೂಟ್ಸ್ ಐಡಿ ಇಲ್ಲ, ಗುಣಮಟ್ಟ ಇಲ್ಲ (FAQ), ಉತ್ತಮ ಗೋಣಿಚೀಲದಲ್ಲಿ ತುಂಬಿಲ್ಲ ಎಂದು ಇಲ್ಲಸಲ್ಲದ ಕುಂಟು ನೆಪ ಹೇಳಿ ಖರೀದಿ ಮಾಡದೆ ಅನ್ನದಾತರನ್ನು ಸತಾಯಿಸುತ್ತಿದೆ ಈ ರೈತ ವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದ್ದಾರೆ.
ಕುರ್ಚಿ ಕಿತ್ತಾಟದಲ್ಲಿ ನೆರೆಭಾದಿತ ರೈತರ ಸಂಕಷ್ಟವನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರ ರೈತರಿಗೆ ಇನ್ನಷ್ಟು ತೊಂದರೆ ಕೊಡದೆ ಈ ಕೂಡಲೇ ಹೆಸರು, ಸೂರ್ಯಕಾಂತಿ, ಉದ್ದಿನ ಕಾಳು, ಸೋಯಾಬೀನ್ ಖರೀದಿ ಆರಂಭ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಚೆಲುವರಾಯ ಸ್ವಾಮಿಯವರನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ರೈತರಿಗೆ ವಂಚಿಸಿದ ಆರೋಪಿಗಳನ್ನು ರಕ್ಷಿಸುವಂತೆ ಮುಖ್ಯಮಂತ್ರಿಗಳ ಆಪ್ತ, ಸಚಿವ @BZZameerAhmedK ಅವರು ಪೊಲೀಸರ ಮೇಲೆ ಒತ್ತಡ ಹಾಕಿರುವುದು ಖಂಡನೀಯ.
ಸಚಿವ ಸಂಪುಟ ಸದಸ್ಯರೇ ಹೀಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳುವುದಾದರೆ ರಾಜ್ಯದಲ್ಲಿ ಸಂವಿಧಾನ, ಕಾನೂನು ನಿಯಮಗಳು ಇದ್ದು ಪ್ರಯೋಜನವೇನು?
ಮಾನ್ಯ @siddaramaiah ನವರೇ, ಜಮೀರ್ ಅವರನ್ನು… pic.twitter.com/hVvVY080dw
— R. Ashoka (@RAshokaBJP) October 26, 2025


