ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಜೆ ಕಾಂತಾರ-1 ವೀಕ್ಷಿಸಲಿದ್ದಾರೆ. ಇತ್ತೀಚೆಗೆ ಭಾರತೀಯ ಅಂಚೆ ವಿಭಾಗದಿಂದ ಕಾಂತಾರಗೆ ವಿಶೇಷ ಗೌರವ ಲಭಿಸಿತ್ತು. ಅಂಚೆ ಲಕೋಟೆಗಳ ಮೇಲೆ ಕಾಂತಾರ ಚಿತ್ರದ ಪೋಸ್ಟರ್‌ಗಳನ್ನು ಪ್ರಕಟಿಸಿತ್ತು.
ಅಂಚೆ ವಿಭಾಗದ ಜೊತೆ ಕೈ ಜೋಡಿಸಿದ್ದ ಹೊಂಬಾಳೆ ಫಿಲಂಸ್ ಅದನ್ನು ಅಧಿಕೃತವಾಗಿ ಪೋಸ್ಟ್ ಮಾಡಿತ್ತು. ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರಪತಿಗಳಿಗೆ ಕಾಂತಾರ ವಿಶೇಷ ಪ್ರದರ್ಶನ
ವ್ಯವಸ್ಥೆ ಮಾಡಿದೆ.
ಕೇರಳದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ಬಹಳಷ್ಟು ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ 2ನೇ ಕನ್ನಡ ಸಿನಿಮಾ ಎಂಬ ದಾಖಲೆ ಬರೆದಿದೆ. 2022 ರಲ್ಲಿ ಕೇರಳದಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಗಳಿಕೆಯನ್ನು ಕಾಂತಾರ ಚಾಪ್ಟರ್ 1 ಮೀರಿಸಿದೆ.
ಭಾರತದಲ್ಲಿ ‘ಕಾಂತಾರʼ ಎರಡೇ ದಿನಕ್ಕೆ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಚಿತ್ರ ಇದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನ ಕನ್ನಡದಲ್ಲಿ ೨0 ಕೋಟಿ ರೂಪಾಯಿ, ತೆಲುಗಿನಲ್ಲಿ 13 ಕೋಟಿ , ಹಿಂದಿಯಲ್ಲಿ 18.5 ಕೋಟಿ, ತಮಿಳಿನಲ್ಲಿ 5.5 ಕೋಟಿ ಹಾಗೂ ಮಲಯಾಳಂನಿಂದ 5.25 ಕೋಟಿ ರೂಪಾಯಿಗಳಿಸಿದೆ. ಚಿತ್ರ 300 ಕೋಟಿ ರೂಪಾಯಿ ಕ್ಲಬ್ ಸೇರುವುದು ಖಚಿತವಾಗಿದೆ.