ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಥಣಿಸಂದ್ರದಲ್ಲಿ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶ ಮೂಲದ ಸುಮನಾ(22) ಮೃತ ಗರ್ಭಿಣಿ. ಪತಿ ಶಿವಂ ಎಂಬಾತನ ಜೊತೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಮಹಿಳೆ ಮೃತಪಟ್ಟಿದ್ದರು. ವಾಸನೆ ಬಂದು ಸ್ಥಳೀಯರು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮೂಗಿನಲ್ಲಿ ರಕ್ತ ಬಂದು ಮೃತಪಟ್ಟಿದ್ದು, ಪತ್ನಿಯ ಮೃತದೇಹದ ಜೊತೆ ಪ ಎರಡು ದಿನ ಕಳೆದಿರುವುದು ಗೊತ್ತಾಗಿದೆ.
ಸ್ಥಳೀಯರು ಗಮನಿಸಿದ ನಂತರ ಪತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದವನಾತ ಪತಿ ಶಿವಂ ವೃತ್ತಿಯಲ್ಲಿ ಪೇಂಟರ್ ಆಗಿದ್ದ. ಪತ್ನಿಯ ಸಾವಿನ ಮೊದಲ ದಿನ ಪೈಂಟಿಂಗ್ ಕೆಲಸಕ್ಕೆ ಹೋಗಿದ್ದ ಶಿವಂ, ಎರಡನೇ ದಿನ ರಾತ್ರಿ ಪತ್ನಿ ಮೃತದೇಹದ ಮುಂದೆಯೇ ಮದ್ಯಪಾನ ಮಾಡಿ ಎಗ್ ಬುರ್ಜಿ ಮಾಡಿಕೊಂಡು ಮೃತದೇಹ ಮುಂದೆ ಊಟ ಮುಗಿಸಿ ನಿದ್ದೆ ಮಾಡಿದ್ದ ಎನ್ನಲಾಗಿದೆ.
ಸ್ಥಳಕ್ಕೆ ಹೆಣ್ಣೂರು ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.