Monday, September 08, 2025
Menu

ನಾಳೆ, ನಾಳಿದ್ದು ಬೆಂಗಳೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ: ಬೆಸ್ಕಾಂ

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಬೆಸ್ಕಾಂ ವಿದ್ಯುತ್ ಕಡಿತಗೊಳಿಸಲಿದೆ. ಬಾಣಸವಾಡಿ 66/11 ಕೆ.ವಿ. ಉಪಕೇಂದ್ರದಲ್ಲಿ ನಡೆಯುತ್ತಿರುವ ತುರ್ತು ನಿರ್ವಹಣಾ ಕಾರ್ಯಗಳ ಕಾರಣ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್ 9 ಮತ್ತು 10 ರಂದು ಬೆಳಗ್ಗೆ 10:00 ರಿಂದ ಮಧ್ಯಾಹ್ನ 12:00ರವರೆಗೆ ಬಾಣಸವಾಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು: ಬಾಣಸವಾಡಿ, ಹೊರಮಾವು, ಪಿ&ಟಿ ಲೇಔಟ್, ನಿಸರ್ಗ ಕಾಲೋನಿ, ನಂದನಂ ಕಾಲೋನಿ, ಆಶೀರ್ವಾದ್ ಕಾಲೋನಿ, ಜ್ಯೋತಿನಗರ, ಅಗರ್, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಬಡಾವಣೆ, ತೆಂಗಿನ ತೋಟ, ಅಮರ್ ರೀಜೆನ್ಸಿ, ವಿಜಯಾ ಬ್ಯಾಂಕ್ ಕಾಲೋನಿ, HRBR ಲೇಔಟ್, ಕಮ್ಮನಹಳ್ಳಿ ಮುಖ್ಯ ರಸ್ತೆ, ಕಲ್ಯಾಣ್ ನಗರ, ಹೆಣ್ಣೂರು, ಚೇಳಿಕೆರೆ, ಮೇಗನಹಳ್ಳಿ, ಮತ್ತು ಸಮೀಪದ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ರಾಮಮೂರ್ತಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು: ಗೆದ್ದಲಹಳ್ಳಿ, ಕೊತ್ತನೂರು, ವಡ್ಡರಪಾಳ್ಯ, ಜಾನಕಿರಾಮ ಬಡಾವಣೆ, ಬಿಡಿಎಸ್ ಗಾರ್ಡನ್, ಸತ್ಯ ಎನ್ಕ್ಲೇವ್, ಪ್ರಕೃತಿ ಲೇಔಟ್, ಹೊಯ್ಸಳನಗರ, ಬೃಂದಾವನ ಲೇಔಟ್, ವಿನಾಯಕ ಬಡಾವಣೆ, ವಿವೇಕಾನಂದ ಬಡಾವಣೆ, ಮಂಜುನಾಥ್ ನಗರ ರಸ್ತೆ, ಯಾಸಿನ್ ನಗರ, NRI ಲೇಔಟ್, ಪುಣ್ಯಭೂಮಿ ಲೇಔಟ್, ಸಮದ್ ಲೇಔಟ್, ಕುಳ್ಳಪ್ಪ ವೃತ್ತ, ರಾಜ್‌ಕುಮಾರ್ ಪಾರ್ಕ್, ಸಂಗೊಳ್ಳಿ ರಾಯಣ್ಣ ರಸ್ತೆ, ರಾಮಮೂರ್ತಿ ನಗರ ಮುಖ್ಯ ರಸ್ತೆ, ಕೃಷ್ಣಾರೆಡ್ಡಿ ಲೇಔಟ್, ಚಿಕ್ಕ ಬಾಣಸವಾಡಿ, ಸುಬ್ಬಯ್ಯನಪಾಳ್ಯ, ಗ್ರೀನ್ ಪಾರ್ಕ್ ಲೇಔಟ್, ಫ್ಲವರ್ ಗಾರ್ಡನ್, ದಿವ್ಯ ಉನ್ನತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಬೈರತಿ, ಕ್ಯಾಲಸನಹಳ್ಳಿ, ನಕ್ಷತ್ರ ಲೇಔಟ್, ಬೈರತಿ ಬಂಡೆ, ಸಂಗಮ್ ಎನ್‌ಕ್ಲೇವ್, ಅತ್ತಂ ವಿದ್ಯಾನಗರ, ಬೈರತಿಹಳ್ಳಿ, ಕನಕಶ್ರೀ ಗ್ರಾ.ಪಂ, ನಂಜಪ್ಪ ಗಾರ್ಡನ್, ಸಿಎನ್ಆರ್ ಲೇಔಟ್, ಆರ್.ಎಸ್. ಪಾಳ್ಯ, ಮುನಿಕಲ್ಲಪ್ಪ ಗಾರ್ಡನ್, ಹನುಮಂತಪ್ಪ ರಸ್ತೆ, ಕಲ್ಕೆರೆ, ಮುನೇಗೌಡ ರಸ್ತೆ, ಸಮೃದ್ಧಿ ಲೇಔಟ್, ಮತ್ತು ಜಯಂತಿ ನಗರ ನಿವಾಸಿಗಳು ಕೂಡ ವಿದ್ಯುತ್‌ ಕಡಿತದಿಂದ ತೊಂದರೆಗೆ ಒಳಗಾಗಲಿದ್ದಾರೆ.

ನಾಗರಿಕರು ವಿದ್ಯುತ್‌ ಜಾಲ ನಿರ್ವಹಣಾ ಕಾರ್ಯ ಸಮಯದಲ್ಲಿ ಸಹಕರಿಸುವಂತೆ ಬೆಸ್ಕಾಂ ನಾಗರಿಕರಲ್ಲಿ ಮನವಿ ಮಾಡಿಕೊಂಡಿದೆ. ಮೊಬೈಲ್‌, ಲ್ಯಾಪ್‌ ಟಾಪ್‌ ಮತ್ತು ಇತರ ಅಗತ್ಯ ವಸ್ತುಗಳನ್ನು ಮುಂಚಿತವಾಗಿ ಚಾರ್ಜ್ ಮಾಡಲು, ಗೃಹೋಪಯೋಗಿ ಉಪಕರಣಗಳಿಗೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮತ್ತು ನೀರು ಸಂಗ್ರಹಿಸಿಡುವಂತೆ ಸಲಹೆ ನೀಡಿದೆ.

Related Posts

Leave a Reply

Your email address will not be published. Required fields are marked *