ನವೆಂಬರ್ 19 ಬುಧವಾರದಂದು ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಅಧಿಕೃತ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಾಜಿನಗರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ 50ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ರಾಜಾಜಿನಗರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 4ನೇ ಬ್ಲಾಕ್, 5ನೇ ಬ್ಲಾಕ್ & 6ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು. ಗುಬ್ಬಣ್ಣ ಇಂಡಸ್ಟ್ರಿಯಲ್ ಏರಿಯಾ, ಡಾ. ಮೋದಿ ಹಾಸ್ಪಿಟಲ್ ರೋಡ್, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ 1ನೇ ಕ್ರಾಸ್, 2ನೇ ಕ್ರಾಸ್, 3ನೇ ಕ್ರಾಸ್, 4ನೇ ಕ್ರಾಸ್, 5ನೇ ಕ್ರಾಸ್, ಮಹಾಗಣಪತಿನಗರ, ಕೆ.ಹೆಚ್.ಬಿ.ಕಾಲೋನಿ 2ನೇ ಹಂತ, ದೇವಯ್ಯ ಪಾರ್ಕ್,ನಾಗಪ್ಪ ಬ್ಲಾಕ್, ಲಿಂಕ್ ರೋಡ್, ಶನಿ ಮಹಾತ್ಮ ಟೆಂಪಲ್, ಪ್ರಕಾಶ ನಗರ, ಗಾಯತ್ರಿ ನಗರ, ಸುಬ್ರಮಣ್ಯನಗರ, ಎಲ್.ಎನ್.ಪುರ, ರಾಜ್ ಕುಮಾರ್ ರೋಡ್, ದಯಾನಂದ ನಗರ, ಸಾಯಿಮಂದಿರ, ಹರಿಶ್ಚಂದ್ರ ಘಾಟ್, ಮಾರುತಿ ಎಕ್ಸ್ಟೆನ್ಶನ್, ರಾಜಾಜಿನಗರ, ಬ್ರಿಗೇಡ್ ಗೇಟ್ ವೇ ಅಪಾರ್ಟ್ ಮೆಂಟ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಮಲ್ಲೇಶ್ವರ ಸ್ವಿಮ್ಮಿಂಗ್ ಪೂಲ್, ಪೈಪ್ಲೈನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
ವಿದ್ಯುತ್ ವ್ಯತ್ಯಯದ ಕಾರಣ ಸಾರ್ವಜನಿಕರು ಸಹರಿಸಬೇಕು, ನಿರ್ವಹಣಾ ಕಾರ್ಯಗಳು ಭವಿಷ್ಯದಲ್ಲಿನ ವಿದ್ಯುತ್ ತೊಂದರೆಗಳನ್ನು ತಪ್ಪಿಸಲು ಮತ್ತು ಸೇವಾ ಗುಣಮಟ್ಟವನ್ನು ಹೆಚ್ಚಿಸಲು ಅತ್ಯವಶ್ಯ ಎಂದು ಬೆಸ್ಕಾಂ ತಿಳಿಸಿದೆ.


