Wednesday, January 14, 2026
Menu

ನಾಳೆಯಿಂದ ಲಾಲ್‍ ಬಾಗ್ ನಲ್ಲಿ ಪೂರ್ಣಚಂದ್ರ ತೇಜಸ್ವಿ ನಾಟಕಗಳ ಪ್ರದರ್ಶನ

lalbagh

ಬೆಂಗಳೂರು: ನಾಡು ಕಂಡ ಶ್ರೇಷ್ಠ ಸಾಹಿತಿ, ಪರಿಸರವಾದಿ ಹಾಗೂ ಚಿಂತಕರಾದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ, ಲಾಲ್‍ ಬಾಗ್ ಸಸ್ಯಶಾಸ್ತ್ರೀಯ ತೋಟದಲ್ಲಿ ಜನವರಿ 14 ರಿಂದ 26 ರವರೆಗೆ “ತೇಜಸ್ವಿ ವಿಸ್ಮಯ” ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ನಾಟಕಗಳ ಪ್ರದರ್ಶನವನ್ನು ಜನವರಿ 16 ರಿಂದ 26 ರ ವರೆಗೆ ಆಯೋಜಿಸಲಾಗಿದೆ.

ಈ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದ್ದು, ಕಾರ್ಯಕ್ರಮದ ಅಂಗವಾಗಿ ತೇಜಸ್ವಿಯವರ ಪ್ರಸಿದ್ದ ಸಾಹಿತ್ಯಕ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಸಾರ್ವಜನಿಕರ ಸಾಂಸ್ಕøತಿಕ ಆಸಕ್ತಿಯನ್ನು ಉತ್ತೇಜಿಸುವ ದೃಷ್ಟಿಯಿಂದ 6 ನಾಟಕಗಳನ್ನು ಏರ್ಪಡಿಸಲಾಗಿದೆ.

ಜನವರಿ 16 ರಂದು ನನ್ನ ತೇಜಸ್ವಿ, ಜನವರಿ 18 ರಂದು ಕರ್ವಾಲೋ, ಜನವರಿ 20 ರಂದು ಕೃμÉ್ಣೀಗೌಡನ ಆನೆ, ಜನವರಿ 22 ರಂದು ಜುಗಾರಿ ಕ್ರಾಸ್, ಜನವರಿ 24 ರಂದು ಯಮಳ ಸೋಲು ಹಾಗೂ ಜನವರಿ 26 ರಂದು ಅಣ್ಣನ ನೆನಪು ನಾಟಕಗಳನ್ನು ಆಯೋಜಿಸಲಾಗಿದೆ.

ಈ ನಾಟಕಗಳು ಕನ್ನಡ ಸಾಹಿತ್ಯ, ಸಂಸ್ಕøತಿ ಹಾಗೂ ತೇಜಸ್ವಿಯವರ ಪರಿಸರ ಚಿಂತನೆಗಳನ್ನು ಜನಸಾಮಾನ್ಯರ ನಡುವೆ ಪರಿಣಾಕಾರಿಯಾಗಿ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಹಾಗೂ ಸರ್ಕಾರದ ಆಶಯಗಳಿಗೂ ಅನುಗುಣವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತೋಟಗಾರಿಕಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *