ಭಾರತವು ಉಗ್ರರ ವಿರುದ್ಧ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಳಿಕ ಮುಂಜಾಗ್ರತಾ ಕ್ರಮವಾಗಿ ಹಲವು ರಕ್ಷಣಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಅದರಂತೆ ರಾಜ್ಯದಲ್ಲೂ ಪ್ರಮುಖ ಸ್ಥಳ , ಸಂಸ್ಥೆಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಆದೇಶದಂತೆ ನಾಡಿನಲ್ಲಿರುವ ಜಲಾಶಯಗಳಿಗೂ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ವಿಜಯನಗರದ ತುಂಗಭದ್ರಾ ಜಲಾಶಯಕ್ಕೆ ಬಿಗಿ ಭದ್ರತೆ ಕಲ್ಪಿಸಿ, ಆಗಮಿಸುವ ಪ್ರವಾಸಿಗರ ಮೇಲೆ ಹದ್ದಿನಕಣ್ಣು ಇರಿಸಲಾಗಿದೆ. ಡಿ.ಎ.ಆರ್.ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಸ್ಥಳೀಯ ಪೊಲೀಸರು ನಿಗಾ ವಹಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಸತ್ಯಮೂರ್ತಿ ಬಿ.ಕುಲಕರ್ಣಿ ಅವರು ಆಣೆಕಟ್ಟುಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ಆದೇಶಿಸಿದ್ದಾರೆ. ರಾಜ್ಯದ 17 ಅಣೆಕಟ್ಟುಗಳ ಮುಖ್ಯ ಎಂಜಿನಿಯರ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಾವೇರಿ ನೀರಾವರಿ ನಿಗಮ ಬೆಂಗಳೂರು, ಕರ್ನಾಟಕ ನೀರಾವರಿ ನಿಗಮ ಬೆಂಗಳೂರು, ಕೃಷ್ಣ ಭಾಗ್ಯ ಜಲನಿಗಮ ಬೆಂಗಳೂರು, ವಿಶ್ವೇಶ್ವರಯ್ಯ ಜಲನಿಗಮ ಬೆಂಗಳೂರು. ಮುಖ್ಯ ಎಂಜಿನಿಯರ್ ನೀರಾವರಿ ದಕ್ಷಿಣ ಮೈಸೂರು, ಹೇಮಾವತಿ ನಾಲಾ ವಲಯ ತುಮಕೂರು, ಹೇಮಾವತಿ ಯೋಜನೆ ಗೊರೂರು, ನೀರಾವರಿ ಉತ್ತರ ಬೆಳಗಾವಿ, ತುಂಗಾ ಮೇಲ್ದಂಡೆ ಶಿವಮೊಗ್ಗ, ಮಲಪ್ರಭಾ ಯೋಜನಾ ವಲಯ ಧಾರವಾಡ, ಮುನಿರಾಬಾದ್ ನೀರಾವರಿ ಕೇಂದ್ರ ವಲಯ, ನೀರಾವರಿ ಯೋಜನಾ ವಲಯ ಕಲ್ಬುರ್ಗಿ, ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ, ಆಲಮಟ್ಟಿ ಅಣೆಕಟ್ಟು ವಲಯ, ಕಾಲುವೆ 1 ಭೀಮರಾಯನಗುಡಿ, ಕಾಲುವೆ 2 ರಾಂಪುರ ನಾರಾಯಣಪುರ ಅಣೆಕಟ್ಟು ಮುಖ್ಯ ಎಂಜಿನಿಯರ್ ಕಾರ್ಯಾಚರಣೆ ಮತ್ತು ನಿರ್ವಹಣೆ ವಲಯಗಳ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.