ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮಿನಾಸಪುರದಲ್ಲಿ ಹಲ್ಲೆಗೈದ ಆರೋಪಿಗಳ ಬಂಧನಕ್ಕೆ ದೂರುದಾರರ ಬಳಿ 1 ಲಕ್ಷ ಹಣಕ್ಕೆ ಬೇಡಿಕೆಯಿಟ್ಟಿದ್ದ ಎಎಸ್ಐ, ಹೆಚ್‌ಸಿ ಗಳಿಬ್ಬರನ್ನು ಎಸ್ಪಿ ಪೃಥ್ವಿಕ್ ಶಂಕರ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಗುರುಮಠಕಲ್ ಠಾಣೆಯ ಎಎಸ್ಐ ಗೋಪಾಲರೆಡ್ಡಿ ಹಾಗೂ ಹೆಡ್ ಕಾನ್ಸಟೇಬಲ್ ವಿಶ್ವನಾಥ ರೆಡ್ಡಿ ಅಮಾನತುಗೊಂಡವರು. ಮಿನಾಸಪುರ ಗ್ರಾಮದ ಅನುಸೂಯ ಎಂಬುವರು ಗಂಡ ಹಾಗೂ ಮಗನ ಮೇಲೆ ಹಲ್ಲೆಯಾಗಿರುವ ಬಗ್ಗೆ ದೂರು ನೀಡಿದ್ದರು.
ಬಳಿಕ ಆರೋಪಿಗಳ ಬಂಧಿಸಲು ಆರೋಪಿ ಪೊಲೀಸರಿಬ್ಬರು ಹಣ ಕೇಳಿದ್ದರು. ಅನುಸೂಯಇಬ್ಬರು ಪೊಲೀಸ್ ಸಿಬ್ಬಂದಿಗೆ ತಲಾ ಹತ್ತು ಸಾವಿರ ಹಣ ನೀಡಿದ್ದರು. 1 ಲಕ್ಷ ಹಣ ನೀಡುವಂತೆ ಆರೋಪಿಗಳು ಒತ್ತಾಯಿಸಿದ್ದರು. ಬಳಿಕ ಎಸ್ಪಿಗೆ ಈ ಬಗ್ಗೆ ಸಾಕ್ಷಿ ಸಮೇತ ಅನುಸೂಯ ದೂರು ನೀಡಿದ್ದಾರೆ. ತನಿಖೆ ನಡೆಸಿ ಇಬ್ಬರು ಆರೋಪಿ ಸಿಬ್ಬಂದಿಯನ್ನು ಅಮಾನತು ಮಾಡಿ ಎಸ್ಪಿ ಪೃಥ್ವಿಕ್ ಶಂಕರ್ ಆದೇಶಿಸಿದರು.