Menu

ರಾಜಕೀಯ ಮುಖಂಡರಿಗೆ ಸಾವಿನ ಭಯ: ಕೋಡಿಮಠ ಶ್ರೀ ಭವಿಷ್ಯ

ಅನೇಕ ರಾಜಕೀಯ ಮುಖಂಡರಿಗೆ ಸಾವಿನ ಭಯವಿದೆ. ಮುಂದಿನ ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಏನಾಗುತ್ತದೆಯೋ ನೋಡಬೇಕು ಎಂದು ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಲೋಕಕ್ಕೆ ಐದು ವರ್ಷ ಜಲ ಹಾಗೂ ವಾಯು ಗಂಡಾಂತರವಿದೆ. ಮತ್ತೆ ಯುದ್ಧ ಭೀತಿ ಎದುರಾಗಿದ್ದು, ಕೆಲವು ದೇಶಗಳು ನಾಶವಾಗಲಿವೆ ಎಂದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೊವಿಡ್ ಕುರಿತು ಮಾತನಾಡಿ, ಮಹಾಮಾರಿ ನಾನಾ ರೂಪಗಳಲ್ಲಿ ಇರಲಿದೆ. ಜನರು ಹುಷಾರಾಗಿರಬೇಕು, ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಸಾಧ್ಯತೆಗಳಿವೆ ಎಂದಿದ್ದಾರೆ.

ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ. ಮತೀಯ ಗಲಭೆಗಳು ಹೆಚ್ಚಾಗಲಿವೆ. ರಾಜಕೀಯ ನಾಯಕನ ಮನೆಗೆ ಕಾರ್ಮೋಡ ಕವಿದು, ಯುದ್ಧ ಭೀತಿ ಮತ್ತೆ ಪ್ರಾರಂಭ ಆಗಲಿದೆ. ಹೊಸ ದೇಶಗಳು ರೂಪುಗೊಳ್ಳಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

Related Posts

Leave a Reply

Your email address will not be published. Required fields are marked *