Thursday, February 27, 2025
Menu

ಎಂಎಲ್ಸಿ ಹೆಸರಿನಲ್ಲಿ ಗಣ್ಯರಿಗೆ ವಿಷಪೂರಿತ ಸ್ವೀಟ್‌ ಬಾಕ್ಸ್‌

ವಿಧಾನಪರಿಷತ್​ ಸದಸ್ಯ ಡಾ. ಧನಂಜಯ ಸರ್ಜಿ ಅವರ ಹೆಸರಿನಲ್ಲಿ ಹೊಸವರ್ಷಕ್ಕೆ ಶುಭಾಶಯ ಕೋರಿ ಶಿವಮೊಗ್ಗ ನಗರದ ಮೂವರು ಗಣ್ಯರಿಗೆ ವಿಷಪೂರಿತ ಸ್ವೀಟ್ ಬಾಕ್ಸ್​ಗಳನ್ನು ಕೊರಿಯರ್‌ ಮೂಲಕ ಕಳುಹಿಸಿರುವ ಪ್ರಕರಣ ಬಯಲಾಗಿದೆ.

ಕೊರಿಯರ್‌ ಮೂಲಕ ಭದ್ರಾವತಿಯಿಂದ ಪಾರ್ಸೆಲ್​ ಕಳುಹಿಸಲಾಗಿತ್ತು. ಒಬ್ಬರು ಸ್ವೀಟ್‌ ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿ ಪ್ರಕರಣ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಎಂಎಲ್​ಸಿ ಧನಂಜಯ ಸರ್ಜಿ ಸ್ವೀಟ್​​ ಅನ್ನು ಲ್ಯಾಬ್​ಗೆ ಕಳಿಸಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸ್ವೀಟ್​ ಬಾಕ್ಸ್​ ಕಳುಹಿಸಿದ ​ಅನಾಮಧೇಯ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವ ಭರವಸೆ ಎಸ್​ಪಿ ನೀಡಿದ್ದಾರೆ ಎಂದು ಎಂಎಲ್​ಸಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ. ಪೊಲೀಸರು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *