Menu

ಮೆಟ್ರೋದಲ್ಲಿ ಪಿಎಂ, ಪಿಎಂ, ಡಿಸಿಎಂ ಪ್ರಯಾಣ: ಶಕ್ತಿ ಯೋಜನೆ ಹಾಸ್ಯ ಚಟಾಕಿ ಸಿಡಿಸಿದ ಮೋದಿ!

pm metro

ಬೆಂಗಳೂರು: ನಮ್ಮ ಮೆಟ್ರೋ ಯೋಜನೆಯ ಫೇಸ್-‌೨ಗೆ ಚಾಲನೆ ನೀಡಿದ ನಂತರ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಸಿದ್ದರಾಮಯ್ಯ ಮೆಟ್ರೋದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದರು.

ಪ್ರಧಾನಿ ಮೋದಿ ಅಲ್ಲಿದ್ದ ಮಹಿಳೆಯರಿಗೆ ನೀವು ಮೆಟ್ರೋದಲ್ಲಿ (Metro) ಹೋಗಲು ಇಷ್ಟ ಪಡುತ್ತಿರೋ? ಬಸ್ಸಿನಲ್ಲಿ ಹೋಗಲು ಇಷ್ಟ ಪಡುತ್ತೀರೋ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆಯರು ನಾವು ಮೆಟ್ರೋದಲ್ಲಿ ಹೋಗಲು ಇಷ್ಟ ಪಡುತ್ತೇವೆ. ಮೆಟ್ರೋ ಪ್ರಯಾಣ ಉತ್ತಮ ಎಂದು ಉತ್ತರಿಸಿದ್ದಾರೆ.

ಈ ವಿಚಾರವನ್ನು ಮೋದಿ ಸಿಎಂ, ಡಿಸಿಎಂ ಕಡೆ ತಿರುಗಿ, ನೋಡಿ ಸಿದ್ದರಾಮಯ್ಯನವರೇ ನೀವು ಮಹಿಳೆಯರಿಗೆ ಫ್ರೀ ಬಸ್ ಮಾಡಿದ್ರೂ ಅವ್ರು ಬಸ್ ಇಷ್ಟಪಡುತ್ತಿಲ್ಲ. ಮೆಟ್ರೋ ಇಷ್ಟ ಅಂತೆ ಎಂದು ಹೇಳಿದರು.

ಮಹಿಳೆಯರಿಗೆ ನೀಡಿದ ಉಚಿತ ಪ್ರಯಾಣವನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ಹಾಸ್ಯ ಚಟಾಕಿ ಸಿಡಿಸಿದರು.
ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ವಂದೇ ಭಾರತ್‌ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಮೆಟ್ರೋ ಉದ್ಘಾಟನೆ ಮಾಡಲು ರಾಗಿಗುಡ್ಡಕ್ಕೆ ಬಂದರು.

ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಪ್ರಧಾನಿ, ಸಿಎಂ, ಡಿಸಿಎಂ ಮೆಟ್ರೋ ರೈಲಿನಲ್ಲಿ ಜೊತೆಯಾಗಿ ಕುಳಿತು ಕೋನಪ್ಪನ ಅಗ್ರಹಾರದವರೆಗೆ (ಇನ್ಫೋಸಿಸ್ ಫೌಂಡೇಶನ್ ಮೆಟ್ರೋ ಸ್ಟೇಷನ್) ಪ್ರಯಾಣಿಸಿದರು. ಈ ಪ್ರಯಾಣದ ವೇಳೆ ಎದುರುಗಡೆ ಬಿಜೆಪಿ ಸಂಸದರು ಕುಳಿತಿದ್ದರು.

Related Posts

Leave a Reply

Your email address will not be published. Required fields are marked *