ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 126ನೇ ಸಂಚಿಕೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಇತ್ತೀಚೆಗೆ ಅಗಲಿದ ಖ್ಯಾತ ಸಾಹಿತ್ಯಗಾರ ಡಾ. ಎಸ್.ಎಲ್. ಭೈರಪ್ಪನವರ ಸಾಹಿತ್ಯ ಕೊಡುಗೆಯನ್ನು ಸ್ಮರಿಸಿದ್ದಾರೆ.
‘ಭೈರಪ್ಪನವರ ಕೃತಿಗಳು ಸಮಾಜಕ್ಕೆ ನೀಡಿದ ಮಾರ್ಗದರ್ಶನ ಅಮೂಲ್ಯ. ಯುವ ಪೀಳಿಗೆಗೆ ಸರಿಯಾದ ದಾರಿ ತೋರಿಸುವಲ್ಲಿ ಅವರ ಬರಹಗಳು ಮಹತ್ತರ ಪಾತ್ರ ವಹಿಸಿವೆ. ಅವರ ಕೃತಿಗಳು ಕೇವಲ ಕನ್ನಡದಲ್ಲೇ ಅಲ್ಲ, ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ಓದುಗರ ಹೃದಯವನ್ನು ತಲುಪಿವೆ’ ಎಂದು ಹೇಳಿದರು.
ನಾನು ಅವರೊಂದಿಗೆ ಹಲವಾರು ವಿಚಾರಗಳ ಕುರಿತು ಚರ್ಚೆ ನಡೆಸಿದ್ದೇನೆ. ಅವರೊಂದಿಗೆ ನನ್ನ ಒಡನಾಟ ಅಪಾರವಾಗಿತ್ತು. ಇಂದಿನ ಪೀಳಿಗೆ ಭೈರಪ್ಪನವರ ಪುಸ್ತಕಗಳನ್ನು ಓದಿ ಜೀವನದ ಪಾಠಗಳನ್ನು ಕಲಿಯಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.
ಕನ್ನಡ ಸಾರಸ್ವತ ಲೋಕದ ಧ್ರುವ ನಕ್ಷತ್ರ, ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರು ಸೆಪ್ಪಟೆಂಬೆರ್ 24ರಂದು ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.
ಭೈರಪ್ಪ ಅವರು ಬರೆದಿದ್ದ ಪ್ರಸಿದ್ಧ ಕಾದಂಬರಿಗಳು ಯಾವುವು, ಅವರ ಯಾವೆಲ್ಲಾ ಕಾದಂಬರಿಗಳು ದೃಶ್ಯರೂಪ ಪಡೆದುಕೊಂಡಿದ್ದವು? ಇಲ್ಲಿದೆ ಮಾಹಿತಿ
ಭೈರಪ್ಪನವರ ಪ್ರಸಿದ್ಧ ಕಾದಂಬರಿಗಳು
•ಭೀಮಕಾಯ (1958)
•ಬೆಳಕು ಮೂಡಿತು (1959)
•ಧರ್ಮಶ್ರೀ (1961)
•ದೂರ ಸರಿದರು (1962)
•ಮತದಾನ (1965)
•ವಂಶವೃಕ್ಷ (1965)
•ಜಲಪಾತ (1967)
•ನಾಯಿ ನೆರಳು (1968)
•ತಬ್ಬಲಿಯು ನೀನಾದೆ ಮಗನೇ (1968)
•ಗೃಹಭಂಗ (1970)
•ನಿರಾಕರಣ (1971)
•ಗ್ರಹಣ (1972)
•ದಾಟು (1973)
•ಅನ್ವೇಷಣ (1976)
•ಪರ್ವ (1979)
•ನೆಲೆ (1983)
•ಸಾಕ್ಷಿ (1986)
•ಅಂಚು (1990)
•ತಂತು (1993)
•ಸಾರ್ಥ (1998)
•ಮಂದ್ರ (2001)
•ಆವರಣ (2007)
•ಕವಲು (2010)
•ಯಾನ (2014)
•ಉತ್ತರಕಾಂಡ (2017)
ಆತ್ಮಕಥನ
•ಭಿತ್ತಿ (1996)
ವಿಮರ್ಶೆ, ಪ್ರಬಂಧ ಮತ್ತು ತತ್ತ್ವಚಿಂತನೆ
•ಸತ್ಯ ಮತ್ತು ಸೌಂದರ್ಯ (1966)
•ಸಾಹಿತ್ಯ ಮತ್ತು ಪ್ರತೀಕ (1967)
•ಕಥೆ ಮತ್ತು ಕಥಾವಸ್ತು (1969)
•ನಾನು ಏಕೆ ಬರೆಯುತ್ತೇನೆ? (1980)
•ಸಂದರ್ಭ: ಸಂವಾದ (2011)
ಸಿನಿಮಾಗಳಾದ ಕಾದಂಬರಿಗಳು
ವಂಶವೃಕ್ಷ (1972)
ತಬ್ಬಲಿಯು ನೀನಾದೆ ಮಗನೆ (1977)
ಮತದಾನ (2001)
ನಾಯಿ ನೆರಳು (2006)