Menu

ಆದಂಪುರ ವಾಯುಸೇನಾ ನೆಲೆಗೆ ಪ್ರಧಾನಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ವಾಯುಸೇನಾ ನೆಲೆಗೆ ಭೇಟಿ ನೀಡಿ ಯೋಧರೊಂದಿಗೆ ಸಂವಾದ ನಡೆಸಿದರು. ಆದಂಪುರ ವಾಯುನೆಲೆಯು ಭಾರತೀಯ ವಾಯುಸೇನೆಯ ಪ್ರಮುಖ ಕೇಂದ್ರವಾಗಿದ್ದು, ಉತ್ತರ ಭಾರತದ ಭದ್ರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಭೇಟಿಯ ಮೂಲಕ ಪ್ರಧಾನಿ ಮೋದಿ ಸಶಸ್ತ್ರ ಪಡೆಗಳ ಧೈರ್ಯವನ್ನು ಗೌರವಿಸಿ, ರಾಷ್ಟ್ರದ ಭದ್ರತೆಗಾಗಿ ಅವರ ಕೊಡುಗೆಯನ್ನು  ಕೊಂಡಾಡಿದರು.

ಪ್ರಧಾನಿಯವರನ್ನು ವಾಯುಸೇನೆಯ ಉನ್ನತ ಅಧಿಕಾರಿಗಳು ಸ್ವಾಗತಿಸಿದರು. ಆಪರೇಷನ್ ಸಿಂಧೂರ್‌ನ ಬಗ್ಗೆ ಮೋದಿ ಸಮಗ್ರ ಮಾಹಿತಿಯನ್ನು ಪಡೆದರು. ರಾಷ್ಟ್ರದ ಗಡಿಗಳನ್ನು ರಕ್ಷಿಸುವಲ್ಲಿ ಆಪರೇಷನ್ ಸಿಂಧೂರ್ ಪಾತ್ರ ಮಹತ್ವದ್ದಾಗಿದೆ ಎಂದ ಪ್ರಧಾನಿ ಈ ಕಾರ್ಯಾಚರಣೆಯಲ್ಲಿ ಯೋಧರ ಶೌರ್ಯ ಮತ್ತು ತಂತ್ರಗಾರಿಕೆಯನ್ನು ಹೊಗಳಿದರು. ವಾಯುನೆಲೆಯ ತಾಂತ್ರಿಕ ಸೌಲಭ್ಯಗಳು ಮತ್ತು ಯುದ್ಧ ತಯಾರಿಯ ಬಗ್ಗೆಯೂ ಚರ್ಚೆ ನಡೆಸಿದರು.

ಈ ಭೇಟಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ನಾನು ಆದಂಪುರ ವಾಯುಸೇನಾ ನೆಲೆಗೆ ಭೇಟಿ ನೀಡಿ, ನಮ್ಮ ಕೆಚ್ಚೆದೆಯ ಯೋಧರನ್ನು ಭೇಟಿಯಾದೆ. ಧೈರ್ಯ, ದೃಢನಿಶ್ಚಯ ಮತ್ತು ನಿರ್ಭಯಯೋಧರೊಂದಿಗೆ ಇದ್ದಿದ್ದು ಬಹಳ ವಿಶೇಷ ಅನುಭವವಾಗಿತ್ತು. ನಮ್ಮ ಸಶಸ್ತ್ರ ಪಡೆಗಳು ರಾಷ್ಟ್ರಕ್ಕಾಗಿ ಮಾಡುವ ಎಲ್ಲದಕ್ಕೂ ಭಾರತವು ಶಾಶ್ವತವಾಗಿ ಕೃತಜ್ಞವಾಗಿದೆ ಎಂದು ಬರೆದಿದ್ದಾರೆ.

Related Posts

Leave a Reply

Your email address will not be published. Required fields are marked *