ಪ್ರಧಾನಿ ನರೇಂದ್ರ ಮೋದಿ ಕೆನಡಾ ಸೇರಿದಂತೆ ಮೂರು ರಾಷ್ಟ್ರಗಳ ಪ್ರವಾಸವನ್ನು ಇಂದು ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಆಪರೇಷನ್ ಸಿಂಧೂರದ ಬಳಿಕ ಪ್ರಧಾನಿಯವರ ಮೊದಲ ವಿದೇಶ ಪ್ರವಾಸ ಇದಾಗಿದೆ.
ಮೆಡಿಟರೇನಿಯನ್ ರಾಷ್ಟ್ರಗಳಾದ ಸೈಪ್ರಸ್ ಮತ್ತು ಕ್ರೊಯೇಷಿಯಾ ದೇಶಕ್ಕೂ ಮೋದಿ ಭೇಟಿ ನೀಡಲಿದ್ದಾರೆ. ಖಲಿಸ್ತಾನಿ ಸಮಸ್ಯೆಯಿಂದಾಗಿ ನವದೆಹಲಿ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟ ನಂತರ ಪುನರ್ ಸ್ಥಾಪಿಸುವ ಪ್ರಯತ್ನದ ಭಾಗವಾಗಿ ಪ್ರಧಾನಿಯ ಕೆನಡಾ ಭೇಟಿಯು ಮಹತ್ವ ಪಡೆದುಕೊಂಡಿದೆ.
ಜೂನ್ 16 ಮತ್ತು 17ರಂದು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಕೆನಡಾದ ಕನನಾಸ್ಕಿಸ್‌ಗೆ ಭೇಟಿ ನೀಡುವಂತೆ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಆಹ್ವಾನ ನೀಡಿದ್ದಂದರು, ಅದರಂತೆ ಮೋದಿ ಆ ಸಭೆಯಲ್ರುಲಿ ಪಾಲ್ಗೊಲ್ಳುವರು. ಶೃಂಗಸಭೆಯ ಸಮಯದಲ್ಲಿ ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳಲ್ಲಿ ಭಾರತದ ನಿಲುವನ್ನು ಪ್ರಧಾನಿ ಮಂಡಿಸಲಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.