Tuesday, February 04, 2025
Menu

ನಾಳೆ ಕುಂಭಮೇಳದಲ್ಲಿ ಪ್ರಧಾನಿ ಮೋದಿ ಪವಿತ್ರಾ ಸ್ನಾನ!

ದೆಹಲಿಯಲ್ಲಿ ವಿಧಾನಸಭಾ ಚುನಾವಣೆ ದಿನವಾದ ಬುಧವಾರವೇ ಪ್ರಧಾನಿ ನರೇಂದ್ರ ಮೋದಿ ಕುಂಭಮೇಳದಲ್ಲಿ ಪವಿತ್ರಾ ಸ್ನಾನ ಮಾಡಲಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಗೆ ಬುಧವಾರ ತೆರಳಲಿರುವ ಮೋದಿ, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಪ್ರಧಾನಿ ಮೋದಿ ಬೆಳಗ್ಗೆ 10:05 ಕ್ಕೆ ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10:10 ಕ್ಕೆ ಡಿಪಿಎಸ್ ಹೆಲಿಪ್ಯಾಡ್‌ಗೆ ಪ್ರಯಾಣಿಸಿ, ನಂತರ 10:45 ಕ್ಕೆ ಏರಿಯಲ್ ಘಾಟ್‌ಗೆ ತೆರಳಲಿದ್ದಾರೆ. 10:50 ಕ್ಕೆ ಏರಿಯಲ್ ಘಾಟ್‌ನಿಂದ ಮಹಾಕುಂಭಕ್ಕೆ ದೋಣಿಯಲ್ಲಿ ಪ್ರಯಾಣಿಸಲಿದ್ದು, 11:00 ರಿಂದ 11:30 ರವರೆಗೆ ಸಂಗಮ್ ಘಾಟ್‌ನಲ್ಲಿ ಸ್ನಾನ ಮಾಡಲಿದ್ದಾರೆ.

ಬೆಳಗ್ಗೆ 11:45 ಕ್ಕೆ ಅವರು ದೋಣಿಯಲ್ಲಿ ಏರಿಯಲ್ ಘಾಟ್‌ಗೆ ಹಿಂತಿರುಗಿ ನಂತರ ಡಿಪಿಎಸ್ ಹೆಲಿಪ್ಯಾಡ್‌ಗೆ ವಾಪಸ್ ಆಗ್ತಾರೆ. ಅಲ್ಲಿಂದ ಅವರು ಪ್ರಯಾಗ್‌ರಾಜ್ ವಿಮಾನ ನಿಲ್ದಾಣಕ್ಕೆ ತೆರಳುತ್ತಾರೆ. ಮಧ್ಯಾಹ್ನ 12:30 ಕ್ಕೆ ವಾಯುಪಡೆಯ ವಿಮಾನದಲ್ಲಿ ಪ್ರಯಾಗ್‌ರಾಜ್‌ನಿಂದ ಹೊರಡಲಿದ್ದಾರೆ.

ಧಾನಿ ಮೋದಿ ಅವರು ಸಂತರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಜೊತೆಗೆ 2025 ರ ಮಹಾಕುಂಭದಲ್ಲಿ ಭಾಗವಹಿಸುವ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ.

Related Posts

Leave a Reply

Your email address will not be published. Required fields are marked *