ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಹಳದಿ ಮಾರ್ಗ ಹಾಗೂ ವಂದೇ ಭಾರತ್ ರೈಲು ಸಂಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಭಾನುವಾರ ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಮುಖಂಡರು ಆಹ್ವಾನಿಸಿದರು.
ಆರ್.ವಿ. ರಸ್ತೆಯಿಂದ ಬೊಮ್ಮನಹಳ್ಳಿವರೆಗಿನ ನಮ್ಮ ಮೆಟ್ರೋ ಫೇಸ್-2 ರೈಲು ಸಂಚಾರಕ್ಕೆ ಮೋದಿ ಹಸಿರುನಿಶಾನೆ ತೋರಿದರು. ಈ ವೇಳೆ ಬೆಂಗಳೂರು ಕೆಂಪೇಗೌಡ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿವರೆಗೆ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಿದರು.
ನೂತನ ರೈಲು ಮಾರ್ಗವು 19 ಕಿ.ಮೀ. ದೂರ ಹೊಂದಿದ್ದು, 7160 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ನೂತನ ರೈಲು ಮಾರ್ಗಕ್ಕೆ ಚಾಲೆ ನೀಡುವ ಮೂಲಕ ಬೆಂಗಳೂರಿನಲ್ಲಿ ಒಟ್ಟಾರೆ ರೈಲು ಮಾರ್ಗದ ವಿಸ್ತಾರ 93 ಕಿ.ಮೀ.ಗೆ ಏರಿಕೆ ಆದಂತೆ ಆಗಿದೆ.
ಇದೇ ವೇಳೆ ಬೆಳಗಾವಿ ಮತ್ತು ಪುಣೆ ನಡುವಣ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಿದರು. ಅಲ್ಲದೇ ಅಮೃತಸರ- ವೈಷ್ಣವದೇವಿ ಕಾತ್ರಿ ರೈಲು ಸಂಚಾರಕ್ಕೆ ಚಾಲನೆ ನೀಡಿದರು.