ಕೊಲಂಬಿಯಾ-ವೆನೆಜುವೆಲಾ ಗಡಿ ಸಮೀಪ ವಿಮಾನ ಪತನಗೊಂಡು ಅದರಲ್ಲಿದ್ದ ಸಂಸದ, ಸಿಬ್ಬಂದಿ ಸೇರಿದಂತೆ 15 ಜನ ಪ್ರಾಣ ಕಳೆದುಕೊಂಡಿದ್ದಾರೆ ದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ವಿಮಾನ ಕುಕುಟಾದಿಂದ ಹೊರಟು ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು, ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ. ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಿದೆ. ಒಬ್ಬರು ಸಂಸದ ಮತ್ತು ಒಬ್ಬರು ಚುನಾವಣಾ ಅಭ್ಯರ್ಥಿ ವಿಮಾನದಲ್ಲಿದ್ದರು ಎನ್ನಲಾಗಿದೆ.
ಬುಧವಾರವಷ್ಟೇ ವಿಮಾನ ಪತನಗೊಂಡು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಅವರು ನಾಲ್ಕು ಪ್ರಮುಖ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಬಾರಾಮತಿಗೆ ಹೊರಟಿದ್ದಾಗ ಈ ದುರಂತ ನಡೆದಿದೆ.
ವಿಮಾನವು ಧಗಧಗನೆ ಹೊತ್ತಿ ಉರಿದಿದ್ದು ಸುಟ್ಟು ಕರಕಲಾಗಿದೆ. ತುರ್ತು ಲ್ಯಾಂಡಿಂಗ್ ಪ್ರಯತ್ನಕ್ಕೆ ಕಾರಣವೇನು ಎಂಬುದರ ಮಾಹಿತಿ ತಿಳಿದು ಬರಬೇಕಿದೆ. ವಿಮಾನವು ತಾಂತ್ರಿಕ ದೋಷದಿಂದ ಅಥವಾ ಇಳಿಯುವಾಗ ಉಂಟಾದ ಅಡಚಣೆಯಿಂದ ಪತನಗೊಂಡಿರಬಹುದು ಎಂದು ಶಂಕಿಸಲಾಗಿದೆ.


